ತಿರುವನಂತಪುರಂ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ, ಭಾಷಾ ಅಲ್ಪಸಂಖ್ಯಾತ ಕ್ಷೇತ್ರಗಳ ಮತಪತ್ರ ಮತ್ತು ಮತಯಂತ್ರಗಳಿಗೆ ಅಂಟಿಸಲಾದ ಮತಪತ್ರದ ಲೇಬಲ್‍ಗಳಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ತಮಿಳು/ಕನ್ನಡದಲ್ಲಿ ಸೇರಿಸಲಾಗುವುದು.
ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ. ಇಡುಕ್ಕಿ, ಪಾಲಕ್ಕಾಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಭಾಷಾ ಅಲ್ಪಸಂಖ್ಯಾತ ಮತದಾರರಿರುವ ವಾರ್ಡ್‍ಗಳಲ್ಲಿ, ಮಲಯಾಳಂ ಜೊತೆಗೆ ತಮಿಳಿನಲ್ಲಿ ಹೆಸರುಗಳನ್ನು ಸೇರಿಸಲಾಗುವುದು ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಭಾಷಾ ಅಲ್ಪಸಂಖ್ಯಾತ ಮತದಾರರಿರುವ ವಾರ್ಡ್‍ಗಳಲ್ಲಿ, ಹೆಸರುಗಳನ್ನು ಕನ್ನಡದಲ್ಲಿ ಸೇರಿಸಲಾಗುವುದು.
ತಿರುವನಂತಪುರಂ ಕಾಪೆರ್Çರೇಷನ್‍ನ ವಲಿಯಸಾಲ ಮತ್ತು ಕರಮನ ವಾರ್ಡ್‍ಗಳಲ್ಲಿ ಮಾಹಿತಿಯನ್ನು ತಮಿಳಿನಲ್ಲಿ ಮತ್ತು ಕಾಸರಗೋಡು ಪುರಸಭೆಯ 18 ವಾರ್ಡ್‍ಗಳಲ್ಲಿ ಕನ್ನಡದಲ್ಲಿ ಸೇರಿಸಲಾಗುವುದು.
ಕೊಲ್ಲಂ ಜಿಲ್ಲೆಯ ಕುಲತುಪುಳ ಮತ್ತು ಆರ್ಯನ್ಕಾವು ಗ್ರಾಮ ಪಂಚಾಯಿತಿಗಳಲ್ಲಿ ತಲಾ ಐದು ವಾರ್ಡ್‍ಗಳು, ಪಥನಂತಿಟ್ಟದ ಸೀತಾಥೋಡ್ ಗ್ರಾಮ ಪಂಚಾಯಿತಿಯ ಗವಿ ವಾರ್ಡ್ ಮತ್ತು ಮಲಯಾಳಪುಳ ಗ್ರಾಮ ಪಂಚಾಯಿತಿಯ ಎರಡು ವಾರ್ಡ್‍ಗಳು, ಇಡುಕ್ಕಿಯ 22 ಗ್ರಾಮ ಪಂಚಾಯಿತಿಗಳ 229 ವಾರ್ಡ್‍ಗಳು, ಪಾಲಕ್ಕಾಡ್‍ನ ಆರು ಗ್ರಾಮ ಪಂಚಾಯಿತಿಗಳ 93 ವಾರ್ಡ್‍ಗಳು ಮತ್ತು ವಯನಾಡಿನ ಥವಿಂಜಲ್ ಗ್ರಾಮ ಪಂಚಾಯಿತಿಯ ಕೈಥಕೊಲ್ಲಿ ವಾರ್ಡ್‍ಗಳಲ್ಲಿ, ಮತಪತ್ರದ ಲೇಬಲ್ ಮತ್ತು ಮತಪತ್ರದಲ್ಲಿ ತಮಿಳು ಭಾಷೆಯಲ್ಲಿ ಮಾಹಿತಿಯನ್ನು ಮುದ್ರಿಸಲಾಗುತ್ತದೆ.
ಕಾಸರಗೋಡು ಜಿಲ್ಲೆಯ 18 ಗ್ರಾಮ ಪಂಚಾಯಿತಿಗಳಲ್ಲಿ, 283 ವಾರ್ಡ್‍ಗಳ ಮತಪತ್ರದ ಲೇಬಲ್ ಮತ್ತು ಮತಪತ್ರವನ್ನು ಕನ್ನಡದಲ್ಲಿ ಮುದ್ರಿಸಲಾಗುತ್ತದೆ.
ಈ ಗ್ರಾಮ ಪಂಚಾಯಿತಿ ವಾರ್ಡ್‍ಗಳನ್ನು ಒಳಗೊಂಡಿರುವ ಬ್ಲಾಕ್ ಪಂಚಾಯತ್ ಮತ್ತು ಜಿಲ್ಲಾ ಪಂಚಾಯಿತಿ ವಾರ್ಡ್‍ಗಳಿಗೆ ಸಂಬಂಧಿಸಿದ ಮತಪತ್ರ ಮತ್ತು ಮತಪತ್ರದ ಲೇಬಲ್‍ನಲ್ಲಿ ಮಾಹಿತಿಯನ್ನು ಆಯಾ ಭಾಷೆಗಳಲ್ಲಿ ಮುದ್ರಿಸಲಾಗುತ್ತದೆ.




