ಆಲುವ: ಇಂದಿನ ಕಲುಷಿತ ಸಾಮಾಜಿಕ ವ್ಯವಸ್ಥೆಗೆ ವೇದಗಳನ್ನು ಆಧರಿಸಿದ ಧಾರ್ಮಿಕ ಮೌಲ್ಯಗಳ ಕೊರತೆಯೇ ಕಾರಣ ಎಂದು ಕೊಳತ್ತೂರು ಅದ್ವೈತ ಆಶ್ರಮದ ಮುಖ್ಯಸ್ಥ ಸ್ವಾಮಿ ಚಿದಾನಂದಪುರಿ ಹೇಳಿದರು.
ಧಾರ್ಮಿಕ ಜೀವನದ ಮೂಲಕವೇ ನಾವು ಪ್ರಗತಿ ಸಾಧಿಸಲು ಸಾಧ್ಯ ಎಂದು ಸ್ವಾಮಿಗಳು ಹೇಳಿದರು. ವೇಲಿಯತ್ನಾಡು ತಂತ್ರ ವಿದ್ಯಾಪೀಠದಲ್ಲಿ ಮಾಧವಜಿ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆದ ಕ್ಷೇತ್ರೀಯ ವೇದ ಸಮ್ಮೇಳನವನ್ನು ಸ್ವಾಮಿಗಳು ಉದ್ಘಾಟಿಸುತ್ತಿದ್ದರು.
ಧರ್ಮ ಮತ್ತು ಮತದ ನಡುವಿನ ವ್ಯತ್ಯಾಸವನ್ನು ವೇದಗಳಲ್ಲಿ ಗುರುತಿಸಬೇಕು ಮತ್ತು ಧರ್ಮದ ಆಧಾರ ವೇದಗಳು ಎಂದು ಚಿದಾನಂದಪುರಿ ಸ್ವಾಮಿಗಳು ಹೇಳಿದರು.
ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನದ ಕಾರ್ಯದರ್ಶಿ ವಿರೂಪಾಕ್ಷಿ ವಿ. ಜೂಡಿಪಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತಂತ್ರ ವಿದ್ಯಾಪೀಠದ ಅಧ್ಯಕ್ಷ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಾ. ಇ.ಎನ್. ಈಶ್ವರನ್ ನಂಬೂದಿರಿ ಸ್ವಾಗತಿಸಿ, ಗೋಪಾಲಕೃಷ್ಣನ್ ವಂದಿಸಿದರು




