ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನವು ಈ ಬಾರಿ ಭಾರೀ ಗೊಂದಲ ಹಾಗೂ ಆತಂಕದಿಂದ ಕೂಡಿದೆ. ಭಾರೀ ಜನ ಸಂದಣೆ ಆಗುತ್ತಿದ್ದು, ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೇರಳ ಸರ್ಕಾರವು ಈ ಬಾರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವವರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಲ್ಲ ಎನ್ನುವ ಆರೋಪವನ್ನು ಬಿಜೆಪಿ ಮತ್ತು ಸಾರ್ವಜನಿಕ ವಲಯದಿಂದಲೂ ಕೇಳಿ ಬಂದಿದೆ.
ಆದರೆ, ಆಡಳಿತರೂಢ ಎಲ್‌ಡಿಎಫ್ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎಂದು ದೂರಿತ್ತು. ಈ ನಡುವೆ ತಮಿಳುನಾಡಿನ ಬಿಜೆಪಿ ಮುಖಂಡ ಕೆ. ಅಣ್ಣಾಮಲೈ ಅವರು ಶಬರಿಮಲೆಯಲ್ಲಿ ಜನದಟ್ಟಣೆಯಲ್ಲಿ ಸಿಲುಕಿರುವ ಸಣ್ಣ ಹೆಣ್ಣು ಮಗು (ಮಾಲಾಧಾರಿ ಸ್ವಾಮಿ) ಕಣ್ಣೀರು ಹಾಕುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದೀಗ ಬಿಜೆಪಿ ಮುಖಂಡ ಕೆ. ಅಣ್ಣಾಮಲೈ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವೈರಲ್ ವಿಡಿಯೋ ಹಂಚಿಕೊಂಡಿರುವ ಅವರು, ಎಲ್‌ಡಿಎಫ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವರ್ಷದಿಂದ ವರ್ಷಕ್ಕೆ ನಾಸ್ತಿಕ ಎಲ್‌ಡಿಎಫ್ ಸರ್ಕಾರದ ನಿರಾಸಕ್ತಿ ಲಕ್ಷಾಂತರ ಅಯ್ಯಪ್ಪ ಭಕ್ತರಿಗೆ ಅನವಶ್ಯಕವಾದ ತೊಂದರೆಗಳನ್ನು ಉಂಟುಮಾಡುತ್ತಿದೆ ಎಂಬುದನ್ನು ನೋಡುವುದು ನಿಜಕ್ಕೂ ಬೇಸರದ ಸಂಗತಿ.
ಎಲ್‌ಡಿಎಫ್ ಸರ್ಕಾರದ ಕಳಪೆ ಸಿದ್ಧತೆ ಮತ್ತು ದುರುಪಯೋಗದಿಂದಾಗಿ ದೇಶಾದ್ಯಂತದ ಯಾತ್ರಿಕರು ಅಪಾರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಒಂದೆಡೆ, ಭಕ್ತರಿಗೆ ಅಗತ್ಯ ಸೇವೆಗಳು ಅಸಮರ್ಪಕವಾಗಿ ಮಾಡಲಾಗಿದೆ. ಮತ್ತೊಂದೆಡೆ ಅಯ್ಯಪ್ಪ ಸೇವಾ ಸಂಘ, ಅಮೃತಾನಂದಮಯಿ ಮಠ ಮತ್ತು ಸುಬ್ರಹ್ಮಣ್ಯ ಧಾರ್ಮಿಕ ಟ್ರಸ್ಟ್‌ನಂತಹ ಸಂಸ್ಥೆಗಳು ತಮ್ಮ ಸ್ವಯಂಪ್ರೇರಿತ ಬೆಂಬಲವನ್ನು ನೀಡುವುದನ್ನು ನಿರ್ಬಂಧಿಸಲಾಗಿದೆ ಎಂದು ವರದಿಯಾಗಿರುವುದು ತೀವ್ರ ಕಳವಳಕಾರಿಯಾಗಿದೆ ಎಂದು ಕೆ. ಅಣ್ಣಾಮಲೈ ಅವರು ಆಕ್ರೋಶ ಹೊರ ಹಾಕಿದ್ದಾರೆ.
ಶಬರಿಮಲೆ ಕೇವಲ ತೀರ್ಥಯಾತ್ರೆಯ ಸ್ಥಳವಲ್ಲ; ಇದು ನಮ್ಮ ದೇಶದ ಲಕ್ಷಾಂತರ ಜನರಿಗೆ ಆಧ್ಯಾತ್ಮಿಕ ಆಧಾರವಾಗಿದೆ. ಸರ್ಕಾರವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ಪ್ರಾಮಾಣಿಕತೆ ಮತ್ತು ಗೌರವದಿಂದ ತನ್ನ ಜವಾಬ್ದಾರಿಯುತ ಕೆಲಸವನ್ನು ಮಾಡುವುದು ಮಾತ್ರ ಎಂದು ಅವರು ಹೇಳಿದ್ದಾರೆ.
ಶಬರಿಮಲೆ ಯಾತ್ರೆ ಹೋಗಿರುವ ಭಕ್ತರಿಗೆ ಸಂಕಷ್ಟ
ಇನ್ನು ಶಬರಿಮಲೆ ಯಾತ್ರೆಗೆ ಹೋಗಿರುವ ಸಾವಿರಾರು ಭಕ್ತರು ಅಲ್ಲಿ ಸಮಸ್ಯೆ ಆಗುತ್ತಿರುವ ಬಗ್ಗೆ ಕಣ್ಣೀರು ಹಾಕಿದ್ದಾರೆ. ಎಷ್ಟೊಂದು ಸಣ್ಣ ಮಕ್ಕಳು ಪ್ರಜ್ಞೆ ತಪ್ಪಿ ಬೀಳುತ್ತಿದ್ದಾರೆ. ಇಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ ಎಂದು ಭಕ್ತಾದಿಯೊಬ್ಬರು ಹೇಳಿದ್ದಾರೆ. ಈ ಬಾರಿ ಸರ್ಕಾರವು ಇನ್ನಷ್ಟು ಅಗತ್ಯ ಮುಂಜಾಗ್ರತಾ ಕ್ರಮಗಳು ಹಾಗೂ ಮೂಲಸೌಕರ್ಯ ಕಲ್ಪಿಸಬಹುದಾಗಿತ್ತು ಎಂದು ಶಬರಿಮಲೆಗೆ ಹೋಗಿರು ಭಕ್ತರು ಹೇಳಿದ್ದಾರೆ.
https://x.com/annamalai_k/status/1991386562442195442?ref_src=twsrc%5Etfw%7Ctwcamp%5Etweetembed%7Ctwterm%5E1991386562442195442%7Ctwgr%5E5aef01894f36de9167961a194fa1a84c6ca7c623%7Ctwcon%5Es1_c10&ref_url=https%3A%2F%2Fapi-news.dailyhunt.in%2F




