HEALTH TIPS

ವಿಜಯೋತ್ಸವ ಭಾಷಣದಲ್ಲಿ ನೆಹರೂ ಸ್ಮರಿಸಿದ ನ್ಯೂಯಾರ್ಕ್‌ ನೂತನ ಮೇಯರ್ ಮಮ್ದಾನಿ

 ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಜೊಹ್ರಾನ್ ಮಮ್ದಾನಿ ಅವರು ತಮ್ಮ ವಿಜಯೋತ್ಸವ ಭಾಷಣದಲ್ಲಿ ಭಾರತದ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಮಾತುಗಳನ್ನು ಸ್ಮರಿಸಿದ್ದಾರೆ.

ಡೆಮಾಕ್ರೆಟಿಕ್‌ ಪಕ್ಷದಿಂದ ಸ್ಪರ್ಧಿಸಿದ್ದ ಮಮ್ದಾನಿ, ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಾಜಿ ಗವರ್ನರ್‌ ಆಂಡ್ರ್ಯೂ ಕ್ಯುಮೊ ಹಾಗೂ ರಿಪಬ್ಲಿಕನ್‌ ಪಕ್ಷದ ಕರ್ಟಿಸ್‌ ಸ್ಲಿವಾ ಅವರ ಎದುರು ಜಯ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 


ಮಂಗಳವಾರ ರಾತ್ರಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮಮ್ದಾನಿ, 'ಸ್ನೇಹಿತರೇ, ಈ ಗೆಲುವಿನ ಮೂಲಕ ನಾವು ವಂಶ ಪಾರಂಪರ್ಯ ರಾಜಕಾರಣವನ್ನು ಕೊನೆಗೊಳಿಸಿದ್ದೇವೆ. ಆಯಂಡ್ರೊ ಕ್ಯುಮೊ ಅವರ ಹೆಸರನ್ನು ಇಂದು ನಾನು ಕೊನೆಯ ಬಾರಿಗೆ ಉಚ್ಛರಿಸುತ್ತೇನೆ. ಏಕೆಂದರೆ ಬಹುಸಂಖ್ಯಾತರನ್ನು ಕಡೆಗಣಿಸಿ ಕೆಲವರಿಗಷ್ಟೇ ಸೇವೆ ಸಲ್ಲಿಸುವ ಅವರ ರಾಜಕೀಯ ಅಧ್ಯಾಯಕ್ಕೆ ಅಂತ್ಯ ಹಾಡುತ್ತಿದ್ದೇವೆ. ಕ್ಯುಮೊ ಅವರ ಖಾಸಗಿ ಬದುಕು ಉತ್ತಮವಾಗಿರಲಿ ಎಂದು ಶುಭ ಹಾರೈಸುತ್ತೇನೆ' ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

'ಇಲ್ಲಿ ನಿಮ್ಮ ಮುಂದೆ ನಿಂತು, ಜವಾಹರಲಾಲ್ ನೆಹರೂ ಅವರ ಮಾತುಗಳನ್ನು ನೆನಪಿಸಿಕೊಳ್ಳಲು ನಾನು ಬಯಸುತ್ತೇನೆ. 'ಇತಿಹಾಸದಲ್ಲಿ ಅಪರೂಪಕ್ಕೊಮ್ಮೆ ಹಳೆಯದರಿಂದ ಹೊಸದಕ್ಕೆ ಹೆಜ್ಜೆ ಹಾಕುವ ಕಾಲ ಬರುತ್ತದೆ. ಆ ಯುಗವು ಕೊನೆಗೊಂಡಾಗ ಸುದೀರ್ಘ ಕಾಲ ದಮನಕ್ಕೊಳಗಾದ ದೇಶದ ಆತ್ಮವು ಧ್ವನಿಯನ್ನು ಕಂಡುಕೊಳ್ಳುತ್ತದೆ' ಎಂದು ನೆಹರೂ ಹೇಳಿದ್ದರು. ಇಂದು ನಾವು ಹಳೆಯದರಿಂದ ಹೊಸದಕ್ಕೆ ಕಾಲಿಡುತ್ತಿದ್ದೇವೆ' ಎಂದು ಹೇಳಿದ್ದಾರೆ.

ಮಮ್ದಾನಿ ಅವರು ತಮ್ಮ ವಿಜಯೋತ್ಸವ ಭಾಷಣವನ್ನು ಮುಗಿಸುತ್ತಿದ್ದಂತೆ, ಬಾಲಿವುಡ್‌ನ ಜನಪ್ರಿಯ ಹಾಡು 'ಧೂಮ್‌ ಮಚಾಲೆ' ಸಭಾಂಗಣದ ತುಂಬಾ ರಿಂಗಣಿಸಿದೆ.

ಎರಡು ಶತಮಾನಗಳ ವಸಹಾತುಶಾಹಿ ಆಡಳಿತ ಕೊನೆಗೊಂಡು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭ 1947 ಆಗಸ್ಟ್‌ 14ರ ಮಧ್ಯರಾತ್ರಿ ನೆಹರೂ ತಮ್ಮ ಭಾಷಣದಲ್ಲಿ ಈ ಮಾತನ್ನು ಹೇಳಿದ್ದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries