ಕೊಟ್ಟಾಯಂ: ಶಬರಿಮಲೆಯಲ್ಲಿ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ. ಅಯ್ಯಪ್ಪ ವ್ರತಧಾರಿಗಳು ಕುಡಿಯುವ ನೀರಿಲ್ಲದೆ ಆರರಿಂದ ಏಳು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿರುವುದು ಹೇಯ ನಿರ್ವಹಣೆಯ ಸಾಕ್ಷ್ಯವಾಗಿದೆ ಎಮದವರು ಟೀಕಿಸಿದರು.
ಪಂಪಾ ಮತ್ತು ನೀಲಕ್ಕಲ್‍ನಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ದೇವಸ್ವಂ ಮಂಡಳಿ ಮತ್ತು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.
ಸ್ವರ್ಣದ ಹೊದಿಕೆ ಕಳವು ಪ್ರಕರಣದಲ್ಲಿ ಪದ್ಮಕುಮಾರ್ ಅವರನ್ನು ಎಸ್‍ಐಟಿ ಏಕೆ ಮುಟ್ಟಲಿಲ್ಲ? ಸರ್ಕಾರ ತನಿಖೆಯನ್ನು ಬುಡಮೇಲುಗೊಳಿಸುತ್ತಿದೆ ಎಂದು ಕೆ. ಸುರೇಂದ್ರನ್ ಹೇಳಿದರು.
ರಾಜ್ಯ ಸರ್ಕಾರಕ್ಕೆ 500 ಕೋಟಿ ರೂ. ನಷ್ಟ ಉಂಟುಮಾಡಿದ ಕ್ಯಾಷ್ಯೂ ಕಾಪೆರ್Çರೇಷನ್ ಭ್ರಷ್ಟಾಚಾರ ಪ್ರಕರಣದಲ್ಲಿ ಐಐಎನ್‍ಟಿಯುಸಿ ನಾಯಕ ಚಂದ್ರಶೇಖರನ್ ಅವರಿಗೆ ಪ್ರಾಸಿಕ್ಯೂಷನ್ ಅನುಮತಿ ನೀಡದಿರುವುದು ಒಪ್ಪಂದದ ಭಾಗವಾಗಿದೆ. ಎಲ್‍ಡಿಎಫ್-ಯುಡಿಎಫ್ ಒಪ್ಪಂದದ ಭಾಗವಾಗಿ ಚಂದ್ರಶೇಖರನ್ ಅವರನ್ನು ಉಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಕೊಟ್ಟಾಯಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.





