HEALTH TIPS

ಎನ್.ಟಿ.ಯು. ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ

ಉಪ್ಪಳ: ಎನ್.ಟಿ.ಯು.(ದೇಶೀಯ ಅಧ್ಯಾಪಕ ಪರಿಷತ್) ಮಂಜೇಶ್ವರ ಉಪಜಿಲ್ಲಾ ಸಮ್ಮೇಳನವು ಬಾಯಾರು ಮುಳಿಗದ್ದೆ ಹೆದ್ದಾರಿ ಎಯುಪಿ ಶಾಲೆಯಲ್ಲಿ ಭಾನುವಾರ ನಡೆಯಿತು. ಮಂಜೇಶ್ವರ ಉಪಜಿಲ್ಲಾ ಎನ್.ಟಿ.ಯು. ಅಧ್ಯಕ್ಷೆ ಧ್ವಜಾರೋಹಣ ಗೈಯುವುದರ ಮೂಲಕ ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಿದರು. ಬಳಿಕ ಹೆದ್ದಾರಿ ಎಯುಪಿ ಶಾಲಾ ಪ್ರಬಂಧಕ ರಾಜೇಶ್  ಎನ್. ಸಮ್ಮೇಳನವನ್ನು  ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಕೆ.ಆರ್ ಅಧ್ಯಕ್ಷತೆ ವಹಿಸಿದ್ದರು. ಎನ್.ಟಿ.ಯು. ರಾಜ್ಯ ವನಿತಾ ವಿಂಗ್ ಜೊತೆ ಕಾರ್ಯದರ್ಶಿ ಸುಚಿತಾ ಟೀಚರ್, ಹೆದ್ದಾರಿ ಶಾಲೆಯ ಮುಖ್ಯ ಶಿಕ್ಷಕ ಆದಿನಾರಾಯಣ ಭಟ್, ರಾಜ್ಯ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಹಾಗೂ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಶುಭ ಹಾರೈಸಿದರು. ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ದೇವಿಪ್ರಸಾದ್ ಉಚ್ಚಿಲ ಸ್ವಾಗತಿಸಿ, ಉಪಾಧ್ಯಕ್ಷ ಶ್ರೀಧರ ಭಟ್ ವಂದಿಸಿದರು. ಹೆದ್ದಾರಿ ಎಯುಪಿ ಶಾಲೆಯ ಶಿಕ್ಷಕಿ ದೀಪಿಕ ಕಾರ್ಯಕ್ರಮ ನಿರೂಪಿಸಿದರು. 


ಸಮಾರಂಭದ ಭಾಗವಾಗಿ ಕಿರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲು ಶಾಲಾ ಮಕ್ಕಳಿಗೆ ಮಂಜೇಶ್ವರ ಉಪಜಿಲ್ಲಾ ಮಟ್ಟದ ರಸಪ್ರಶ್ನೆ ಮತ್ತು ದೇಶಭಕ್ತಿ ಗೀತೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ನಂತರ ನಡೆದ ಸಮ್ಮೇಳನದ ಸಮಾರೋಪ ಸಮಾರಂಭ ಹಾಗೂ ಸಂಘಟನಾ ಚರ್ಚೆಯ ಅಧ್ಯಕ್ಷತೆಯನ್ನು  ಎನ್ ಟಿಯು ರಾಜ್ಯ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ, ಸಂಘಟನೆಯ ರಾಜ್ಯ ಸಮಿತಿ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ ಪಿ, ಮಂಜೇಶ್ವರ ಪೆನ್ಷನರ್ಸ್ ಸಂಘದ ಅಧ್ಯಕ್ಷ ವಿಘ್ನೇಶ್ವರ ಕೆದುಕೋಡಿ, ರಾಜ್ಯ ಸಮಿತಿ ಸದಸ್ಯ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಹಾಗೂ ಜಿಲ್ಲಾ ಕಾರ್ಯದರ್ಶಿ ಅಜಿತ್ ಕುಮಾರ್ ಉಪಸ್ಥಿತರಿದ್ದರು. ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ದೇವಿಪ್ರಸಾದ್ ಉಚ್ಚಿಲ ಕಾರ್ಯಚಟುವಟಿಕೆಗಳ ವರದಿ ವಾಚಿಸಿದರು. ಸಮಿತಿಯ ಕೋಶಾಧಿಕಾರಿ ರಘುವೀರ ಎಮ್ ಲೆಕ್ಕಪತ್ರ ಮಂಡಿಸಿದರು. ಸಹಕಾರ್ಯದರ್ಶಿ ದಯಾನಂದ ಸ್ವಾಗತಿಸಿ, ಮಂಜೇಶ್ವರ ವನಿತಾ ವಿಂಗ್ ಕನ್ವೀನರ್ ಮಮತ ವಂದಿಸಿದರು. ಜಿಲ್ಲಾ ಸಮಿತಿ ಸದಸ್ಯ ಈಶ್ವರ ಕಿದೂರು ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ತೀರ್ಪಗಾರರಾಗಿ ಸಹಕರಿಸಿದ ಶೇಖರ ಶೆಟ್ಟಿ ಬಾಯಾರು ಹಾಗೂ ರೂಪಶ್ರೀ ಕಳಂದೂರು ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನೂತನ ಸಮಿತಿ ರೂಪೀಕರಣ ನಡೆಯಿತು. ಚಂದಿಕಾ ಕೆ ಆರ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಉಚ್ಚಿಲ, ಖಜಾಂಜಿಯಾಗಿ ರಘುವೀರ ಎಮ್ ಸಹಿತ ಸದಸ್ಯರನ್ನೊಳಗೊಂಡ ನೂತನ ಸಮಿತಿ ರೂಪೀಕರಿಸಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries