HEALTH TIPS

ಕನ್ನಡ ಸಂಸ್ಕøತಿಯ ದರ್ಶನ ಮಾಡುವ ಅನನ್ಯ ಸಾಧನ- ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ ಉದ್ಘಾಟಿಸಿ ಡಾ. ಸಿ.ಸೋಮಶೇಖರ್ ಅಭಿಪ್ರಾಯ

ಕಾಸರಗೋಡು: ಕನ್ನಡ ಲಿಪಿ ಮಾತ್ರವಲ್ಲ ಅದು ಭಾಷೆ, ಸಂಸ್ಕøತಿಯ ದರ್ಶನ ಮಾಡುವ ಅನನ್ಯ ಸಾಧನವಾಗಿರುವುದಾಗಿ  ಅಖಿಲಭಾರತ ಶರಣಸಹಿತ್ಯ ಪರಿಷತ್ ಅಧ್ಯಕ್ಷ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪೂರ್ವಾಧ್ಯಕ್ಷ ಡಾ. ಸಿ. ಸೋಮಶೇಖರ್(ಐಎಎಸ್) ತಿಳಿಸಿದ್ದಾರೆ. 


ಅವರು ಕಾಸರಗೋಡು ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ ಹಾಗೂ ಕಾಸರಗೋಡು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷ ಶಿವರಾಮ ಕಾಸರಗೋಡು ಅವರ 60 ರ ಅಭಿನಂದನಾ ಸಮಾರಂಭ ಉದ್ಘಾಟಿಸಿ, ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವಮಾನ್ಯವಾಗಿರುವ ವಚನಸಾಹಿತ್ಯ ಕನ್ನಡದ ಸಂಸ್ಕøತಿಯ ಪ್ರತೀಕವಾಗಿದ್ದು, ಉತ್ತಮ ವಿಚಾರಧಾರೆಗಳ ಹೂರಣವಾಗಿದೆ ಎಂದು ತಿಳಿಸಿದರು. ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ ಎಂಬ ಘೋಷಣೆಯೊಂದಿಗೆ ಕಾಸರಗೋಡನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸುವ ಹೋರಾಟದಲ್ಲಿಮುಂಚೂಣಿಯಲ್ಲಿದ್ದ ಕನ್ನಡದ ಕಟ್ಟಾಳು ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಕನಸು ನನಸಾಗದೇ ಉಳಿದರೂ, ಕಾಸರಗೋಡಿನ ಕನ್ನಡಿಗರಲ್ಲಿ ಅನಾಥಪ್ರಜ್ಞೆ ಕಾಡದಿರುವಂತೆ ಕರ್ನಾಟಕ ಸದಾ ಜತೆಗಿರಲಿದೆ. ಗಡಿನಾಡಿನ ಕನ್ನಡ ಶಾಲೆಗಳಲ್ಲಿನ ಶೋಚನೀಯ ಸ್ಥಿತಿ ಪರಿಹರಿಸುವಲ್ಲಿ ಹಾಗೂ ಕನ್ನಡ ಸ್ಥಳನಾಮಗಳ ಮಲಯಾಳೀಕರಣ ತಡೆಗೆ ಕರ್ನಾಟಕ ಸರ್ಕಾರ ಗಡಿನಡ ಕನ್ನಡಿಗರಿಗೆ ಸದಾ ಬೆಂಗಾವಲಾಗಿರಲಿದೆ ಎಂದು ತಿಳಿಸಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ, ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನ ಸಮಿತಿ ಸ್ಥಾಪಕಾಧ್ಯಕ್ಷ ಕೆ.ಪಿ ಮಂಜುನಾಥ ಸಾಗರ್, ಕನ್ನಡ ಸಾಂಸ್ಕøತಿಕ ಸಂಘಟಕ ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ, ಕೆಯುಡಬ್ಲ್ಯೂಜೆ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾಸರಗೋಡು ಜಿಲ್ಲಾಧ್ಯಕ್ಷ ರವಿ ನಾಯ್ಕಾಪು, ಭಜನಾ ಸಂಕೀರ್ತನಕಾರ ಜಯಾನಂದ ಕುಮರ್ ಹೊಸದುರ್ಗ, ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‍ನ ಶಂಕರಾನಂದ ಸೋಮಯಾಜಿ, ಧಾರವಾಡ ಕರ್ನಾಟಕ ವಿಶ್ವ ವಿದ್ಯಾಳಯದ ಪ್ರಸಾರಾಂಗ ಸಹಾಯಕ ನಿರ್ದೇಶಕ ಡಾ. ಸಿದ್ದಪ್ಪ ಎನ್,  60ನೇ ಜನ್ಮದಿವನ್ನು ಆಚರಿಸುತ್ತಿರುವ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು. 

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಸುಪ್ರಭಾತ ಗಾಯನ ನಡೆಯಿತು. ಕಾರ್ಯಕ್ರಮಕ್ಕೆ ಮೊದಲು ಕಾಸರಗೋಡು ನಗರಸಭಾ ಸದಸ್ಯೆ ಶಾರದಾ ಬಿ ರಾಷ್ಟ್ರಧ್ವಜಾರೋಹಣ ನಡೆಸಿದರು. ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ತಾಯಿ ಭುವನೇಶ್ವರೀ ಭಾವಚಿತ್ರಕ್ಕೆ ದೀಪಾರಾಧನೆ ನಡೆಸಿದರು.  'ಶಿವರಾಮ ಕಾಸರಗೋಡು-60' ಫೆÇೀಟೋ ಗ್ಯಾಲರಿಯನ್ನು ಡಾ.ಕನ್ಯಾನ ಸದಾಶಿವ ಶೆಟ್ಟಿ ಸೇವಾಬಳಗದ ಪ್ರಧಾನ ಕಾರ್ಯದರ್ಶಿ ಜಯರಾಜ ಶೆಟ್ಟಿ ಚಾರ್ಲ ಉದ್ಘಾಟಿಸಿದರು. ಈ ಸಂದರ್ಭ ಶಿವರಾಮ ಕಾಸರಗೋಡು ಅವರ ಬಗ್ಗೆ ವಿಶೇಷ ಚ್ಯಾನಲ್ ತಯಾರಿಸಿದ ಸಾಕ್ಷ್ಯ ಚಿತ್ರವನ್ನು ಸಿ. ಸೋಮಶೇಖರ್ ಬಿಡುಗಡೆಗೊಳಿಸಿದರು. ಕೀರ್ತಿಶೇಷರಾದ 60ಮಂದಿ ಕನ್ನಡಸತ್ಯಾಗ್ರಹಿಗಳು, ಕನ್ನಡ ಹೋರಾಟದ ಮುಖಂಡರ ಭಾವಚಿತ್ರಗಳಿಗೆ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ ಪುಷ್ಪನಮನ ಸಲ್ಲಿಸಿದರು. ಕಾಸರಗೋಡು ನಗರಸಭಾ ಮಾಜಿ ಸದಸ್ಯ ಶಂಕರ್ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ವಿವಿಧ ಗೋಷ್ಠಿ, ವಿಚಾರಸಂಕಿರಣ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries