ಕೊಚ್ಚಿ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಯುಡಿಎಫ್ ಅಲೆ ಎದೇಳಲಿದೆ ಎಂದು ಸಂಸದೆ ಜೆಬಿ ಮಾಥರ್ ಹೇಳಿದ್ದಾರೆ. ಮಹಿಳಾ ಕಾಂಗ್ರೆಸ್ ಯಾತ್ರೆ ಕೈಗೊಂಡಾಗ ಜನರ ಮನಸ್ಸನ್ನು ಓದಿ ಇದನ್ನು ಖಚಿತಪಡಿಸಿರುವೆ ಎಂದವರು ನಿನ್ನೆ ಹೇಳಿದ್ದಾರೆ.
ಮಹಿಳಾ ಕಾಂಗ್ರೆಸ್ ಸಿದ್ಧವಾಗಿದೆ. ಎಲ್‍ಡಿಎಫ್‍ನ ದುಷ್ಕøತ್ಯದಿಂದ ಜನರ ಮನಸ್ಸು ನಲುಗಿದೆ. ಜನರು ಮನಸ್ಸಿನ ಶಾಂತಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ರೈಲುಗಳಲ್ಲಿಯೂ ಹಿಂಸಾಚಾರವಿದೆ. ಕೇರಳದಲ್ಲಿ ಮದ್ಯಪಾನವು ಅತಿರೇಕವಾಗಿದೆ. ಹಿಂಸಾಚಾರದ ಹಿಂದೆಯೂ ಅದುವೇ ಇದೆ. ಕೇರಳದಲ್ಲಿ ತಾಯಂದಿರ ಮೇಲೆ ಪರಿಣಾಮ ಬೀರುವ ಸಮಸ್ಯೆ ಅತಿರೇಕವಾಗಿದೆ.
ಎಲ್‍ಡಿಎಫ್ ಆಡಳಿತವಿರುವ ಕೇರಳದಲ್ಲಿ ಮಾದಕ ದ್ರವ್ಯವು ವೈಭವೀಕರಿಸಲ್ಪಟ್ಟ ವ್ಯವಹಾರವಾಗಿದೆ ಎಂದು ಅವರು ಟೀಕಿಸಿದರು.
ಮಹಿಳೆಯರಿಗೆ 1,000 ರೂ. ಪಿಂಚಣಿ ನೀಡುವುದು ಸ್ವಾಗತಾರ್ಹ. ಆದರೆ ಇಲ್ಲಿ ಸಾವಿರ ರೂಪಾಯಿಗಳಲ್ಲಿ ಬದುಕಲು ಸಾಧ್ಯವೇ? 1000 ರೂ.ವನ್ನು ನಂಬಿ ಎಲ್‍ಡಿಎಫ್‍ಗೆ ಎಲ್ಲರೂ ಮತ ಹಾಕುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಮದವರು ಹೇಳಿದ್ದಾರೆ.




