HEALTH TIPS

ಶ್ರೀಮಂತ ರಾಷ್ಟ್ರಗಳು ಇಂಗಾಲ ಹೊರಸೂಸುವಿಕೆ ತಗ್ಗಿಸಲಿ: ದಿನೇಶ್ ಭಾಟಿಯಾ

ನವದೆಹಲಿ: ಅಭಿವೃದ್ಧಿ ಹೊಂದಿದ ದೇಶಗಳು ಇಂಗಾಲ ಹೊರಸೂಸುವಿಕೆಯ ಪ್ರಮಾಣ ತಗ್ಗಿಸುವ ವಾಗ್ದಾನವನ್ನು ಈಡೇರಿಸಲು ಬದ್ಧವಾಗಬೇಕು ಎಂದು ಭಾರತ ಒತ್ತಿ ಹೇಳಿದೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪ್ಯಾರಿಸ್‌ ಒಪ್ಪಂದ ಜಾರಿಯಾಗಿ ಹತ್ತು ವರ್ಷಗಳು ಕಳೆದರೂ, ಆ ಒಪ್ಪಂದದ ಗುರಿಗಳನ್ನು ತಲುಪಲು ಸಾಧ್ಯವಾಗಿಲ್ಲ ಎಂದು ಬ್ರೆಜಿಲ್‌ನಲ್ಲಿನ ಭಾರತದ ರಾಯಭಾರಿ ದಿನೇಶ್ ಭಾಟಿಯಾ ಹೇಳಿದ್ದಾರೆ.

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಯು (ಸಿಒಪಿ-30) ಬ್ರೆಜಿಲ್‌ನ ಬೆಲೆಮ್‌ ನಗರದಲ್ಲಿ ಸೋಮವಾರ ಆರಂಭವಾಗಲಿದ್ದು, ಅದಕ್ಕೆ ಪೂರಕವಾಗಿ ಭಾರತವು ಈ ಒತ್ತಾಯ ಮಾಡಿದೆ.

ಎರಡು ವಾರಗಳ ಸುದೀರ್ಘ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಸಾಧ್ಯತೆಯಿಲ್ಲ. ಆದರೆ, ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಕೊನೆಯಲ್ಲಿ ನಡೆಯಲಿರುವ ಉನ್ನತ ಮಟ್ಟದ ಮಾತುಕತೆ ವೇಳೆ ಶೃಂಗವನ್ನು ಸೇರಿಕೊಳ್ಳಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries