ಕಾಸರಗೋಡು: ಕಂದಾಯ ಜಿಲ್ಲಾ 64ನೇ ಶಾಲಾ ಕಲೋತ್ಸವದ ಲಾಂಛನ ಬಿಡುಗಡೆ ಸಮಾರಂಭ ಮೊಗ್ರಾಲ್ ಸರ್ಕಾರಿ ವೃತ್ತಿಪರ ಪ್ರೌಢಶಾಲೆಯಲ್ಲಿ ಜರುಗಿತು. ಕಾಸರಗೋಡು ಶಿಕ್ಷಣ ಉಪನಿರ್ದೇಶಕ ಟಿ.ವಿ.ಮಧುಸೂದನನ್ ಲಾಂಛನ ಬಿಡುಗಡೆಗೊಳಿಸಿದರು.
ಶಾಲಾ ಪ್ರಾಂಶುಪಾಲರಾದ ಬಿನಿ ವಿ.ಎಸ್.ಲಾಂಛನ ಸ್ವೀಕರಿಸಿದರು. ಮೊಗ್ರಾಲ್‍ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿರುವ ಶಾಲಾ ಕಲೋತ್ಸವದ ಲಾಂಛನವನ್ನು ಕಣ್ಣೂರಿನ ಪೆÇೀಡಿಕುಂಡು ನಿವಾಸಿ ಜ್ಯೋತಿಷ್ ಕುಮಾರ್ ವಿ.ಪಿ. ವಿನ್ಯಾಸಗೊಳಿಸಿದ್ದಾರೆ. ಜ್ಯೋತಿಷ್ ಅವರು 25ಕ್ಕೂ ಹೆಚ್ಚು ಲಾಂಛನಗಳನ್ನು ವಿನ್ಯಾಸಗೊಳಿಸಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ್ದಾರೆ.
ಶಾಲಾ ಮುಖ್ಯ ಶಿಕ್ಷಕ ಜಯರಾಮ್ ಮಾಸ್ಟರ್, ಪಿಟಿಎ ಅಧ್ಯಕ್ಷ ಲತೀಫ್ ಕೊಪ್ಪಲಂ, ಮಾಧ್ಯಮ ಸಂಚಾಲಕ ಸಿರಾಜುದ್ದೀನ್, ಎಸ್.ಎಂ.ಅನ್ವರ್, ರಶೀದ್ ಮೂಪೇನಕಾಟ್, ಅಶ್ರಫ್ ಮಾಸ್ಟರ್, ಮುಹಮ್ಮದ್ ಆಪೆÇ್ಕೀ, ಮುಹಮ್ಮದ್ ಶೆಮೀರ್ ಸಿ.ಎಚ್, ಪಿ.ಪಿ. ಸೈನಾ, ರಹಮತ್ ಟೀಚರ್, ಅಬ್ದುಲ್ ಖಾದರ್ ಮಾಸ್ತರ್, ಮುಹಮ್ಮದ್ ಅಲ್ತಾಫ್ ಮಾಸ್ಟರ್ ಮೊದಲಾದವರು ಭಾಗವಹಿಸಿದ್ದರು.
ವೇದಿಕೇತರ ಸ್ಪರ್ಧೆಗಳು ಡಿ.2ಮತ್ತು 3ರಂದು ನಡೆಯಲಿದ್ದು, ಜ.5ರಿಂದ 7ರ ವರೆಗೆ ವೇದಿಕೆ ಸ್ಪರ್ಧೆ ಒಳಗೊಂಡ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.





