ಪತ್ತನಂತಿಟ್ಟ: ರೋಸ್ ಬ್ರಾಂಡ್ ಬಿರಿಯಾನಿ ಅಕ್ಕಿಯ ಬ್ರಾಂಡ್ ರಾಯಭಾರಿಯಾಗಿರುವ ನಟ ದುಲ್ಕರ್ ಸಲ್ಮಾನ್ ಗೆ ಡಿಸೆಂಬರ್ 3 ರಂದು ಖುದ್ದಾಗಿ ಹಾಜರಾಗುವಂತೆ ಪತ್ತನಂತಿಟ್ಟದ ಅಡುಗೆ ಸಿಬ್ಬಂದಿ ಪಿ.ಎನ್. ಜಯರಾಜನ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಾಲಯ ನೋಟಿಸ್ ನೀಡಿದೆ.
ರೋಸ್ ಬ್ರಾಂಡ್ ಬಿರಿಯಾನಿ ರೈಸ್‍ನ ವ್ಯವಸ್ಥಾಪಕ ನಿರ್ದೇಶಕ, ಅಕ್ಕಿ ಖರೀದಿಸಿದ ಪತ್ತನಂತಿಟ್ಟದಲ್ಲಿರುವ ಮಲಬಾರ್ ಬಿರಿಯಾನಿ ಮತ್ತು ಸ್ಪೈಸಸ್‍ನ ವ್ಯವಸ್ಥಾಪಕ ಮತ್ತು ದುಲ್ಕರ್ ಸಲ್ಮಾನ್ ಅವರನ್ನು ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ಆರೋಪಿಗಳೆಂದು ಹೆಸರಿಸಲಾಗಿದೆ.
ಆಯೋಗವು ಮೂವರೂ ನಿರ್ದಿಷ್ಟ ದಿನಾಂಕದಂದು ಖುದ್ದಾಗಿ ಹಾಜರಾಗುವಂತೆ ಸೂಚಿಸಿದೆ. ದುಲ್ಕರ್ ಸಲ್ಮಾನ್ ನಟಿಸಿರುವ ಬ್ರ್ಯಾಂಡ್‍ನ ಜಾಹೀರಾತಿನ ಪ್ರಭಾವದಿಂದ ತಾನು ಅಕ್ಕಿ ಖರೀದಿಸಿದ್ದೇನೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ.
ಈ ಘಟನೆಯು ತನ್ನ ಅಡುಗೆ ವ್ಯವಹಾರದ ವಿಶ್ವಾಸಾರ್ಹತೆಗೆ ಹಾನಿಯನ್ನುಂಟುಮಾಡಿದೆ ಮತ್ತು ಹಲವಾರು ವಿವಾಹ ಬುಕಿಂಗ್‍ಗಳನ್ನು ರದ್ದುಗೊಳಿಸಲು ಕಾರಣವಾಯಿತು ಎಂದು ಅವರು ಆರೋಪಿಸಿದ್ದಾರೆ.
ದೂರಲ್ಲಿ ಆರೋಪಿಯಿಂದ 10,250 ರೂ. ಪರಿಹಾರ, ಅಕ್ಕಿಯ ವೆಚ್ಚ ಮತ್ತು ನ್ಯಾಯಾಲಯದ ವೆಚ್ಚಗಳು, ಜೊತೆಗೆ 5 ಲಕ್ಷ ರೂ.ಗಳನ್ನು ಕೋರಲಾಗಿದೆ.




