ಕಾಸರಗೋಡು: 'ಆಕಾಂಕ್ಷಿ' ಬ್ಲಾಕ್ ಕಾರ್ಯಕ್ರಮದ ಅಂಗವಾಗಿ, ಚಿತ್ತಾರಿಕ್ಕಲ್ ಉಪ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಜಿಯೋ ಲ್ಯಾಬ್‍ಗಳನ್ನು ಸ್ಥಾಪಿಸಲಾಗಿದೆ. ಜಿ.ಎಚ್.ಎಸ್. ತಯ್ಯೇನಿ, ಜಿ. ಎಚ್.ಎಸ್.ಎಸ್. ಪೆರುಂಬಟ್ಟ, ಜಿ.ಎಚ್.ಎಸ್.ಎಸ್. ಪರಪ್ಪ, ಜಿ.ಎಚ್.ಎಸ್.ಎಸ್. ಬಳಾಲ್, ಜಿ.ಎಚ್.ಎಸ್.ಎಸ್.ಮಾಲೋತ್ ಕಸಬಾ, ಜಿ.ಎಚ್.ಎಸ್.ಎಸ್. ಚಾಯೋತ್ ಮತ್ತು ಜಿ.ಎಚ್.ಎಸ್.ಎಸ್. ಕಂಬಳ್ಳೂರು ಶಾಲೆಗಳಲ್ಲಿ ಜಿಯೋ ಲ್ಯಾಬ್ ಸೌಲಭ್ಯಗಳನ್ನು ಸ್ಥಾಪಿಸಲಾಯಿತು.
ಪರಪ್ಪ ಬ್ಲಾಕ್ ಪಂಚಾಯಿತಿಯ ಆಸ್ಪಿರೇಷನ್ ಯೋಜನೆಯನ್ವಯ ಬ್ಲಾಕ್ ವ್ಯಾಪ್ತಿಯೊಳಗಿನ ಏಳು ಗ್ರಾಮ ಪಂಚಾಯಿತಿಗಳಲ್ಲಿ 10 ಶಾಲೆಗ¼ಲ್ಲಿ ಲ್ಯಾಬ್ ಅಳವಡಿಸಲಾಗಿದೆ. ಗ್ಯಾಲಕ್ಸಿನಕ್ಷೆಗಳು, ಮೂರು ಆಯಾಮದ ಮಾದರಿಗಳು, ಸಂವಾದಾತ್ಮಕ ಪ್ರದರ್ಶನಗಳು ಮತ್ತು ರಂಗಮಂದಿರದಲ್ಲಿ ಸ್ಥಾಪಿಸಲಾದ ಡಿಜಿಟಲ್ ಪ್ರಸಾರ ವ್ಯವಸ್ಥೆಗಳು ವಿದ್ಯಾರ್ಥಿಗಳು ವಿಷಯವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಆಕರ್ಷಕ ರೀತಿಯಲ್ಲಿ ಪ್ರಸ್ತುತಪಡಿಸಲು ಸಹಾಯ ಮಾಡುವ ರೀತಿಯಲ್ಲಿ ಲ್ಯಾಬ್ ವಿನ್ಯಾಸಗೊಳಿಸಲಾಗಿದ್ದು, ಇದು ಕಲಿಕೆಗೆ ಹೆಚ್ಚಿನ ಸಹಾಯ ಒದಗಿಸಲಿದೆ.
ಜಿಯೋ ಲ್ಯಾಬ್ಸ್ ಒಂದು ಸಮಗ್ರ ಶಿಕ್ಷಣವಾಗಿದ್ದು, ಚಿತ್ತಾರಿಕ್ಕಲ್ ಬಿಆರ್‍ಸಿ, ಪರಪ್ಪ ಬ್ಲಾಕ್ ಪಂಚಾಯಿತಿಯಲ್ಲಿ ಆಸ್ಪಿರೇಷನ್ ಯೋಜನೆಯ ಅಂಗವಾಗಿ ನೀತಿ ಆಯೋಗ ನಿಗದಿಪಡಿಸಿದ 20 ಲಕ್ಷ ರೂಪಾಯಿಗಳನ್ನು ಬಳಸಿ ಯೋಜನೆ ತಯಾರಿಸಲಾಗಿದೆ. ಯೋಜನೆಯನ್ವಯ ತಯ್ಯೇನಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಲಾದ ಮೊದಲ ಜಿಯೋಲ್ಯಾಬ್ ಅನ್ನು ಜಿಲ್ಲಾಧಿಕಾರಿ ಕೆ ಇಂಪಶೇಖರ್ ಉದ್ಘಾಟಿಸಿದರು. ಮಾಜಿ ಇಸ್ರೋ ಯೋಜನಾ ನಿರ್ದೇಶಕರು ಮತ್ತು ಮಂಗಳಯಾನ ಮಿಷನ್‍ನಿರ್ದೇಶಕ ಪಿ.ಕುಞÂಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.





