ಕೊಚ್ಚಿ: ಪೂಜಾಪುರ ಮಹಿಳಾ ಕೇಂದ್ರ ಕಾರಾಗೃಹದಲ್ಲಿನ ಸೌಲಭ್ಯಗಳನ್ನು ನಿರ್ಣಯಿಸಿ ವರದಿ ಸಲ್ಲಿಸುವಂತೆ ತಿರುವನಂತಪುರಂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತಿರುವನಂತಪುರಂನಲ್ಲಿರುವ ಅಟ್ಟಕ್ಕುಳಂಗರ ಮಹಿಳಾ ಜೈಲು ಮತ್ತು ಕರಕ್ಷನ್ ಹೋಂ ನಿಂದ ಪೂಜಾಪುರ ಕೇಂದ್ರ ಕಾರಾಗೃಹದ ಹಳೆಯ ಮಹಿಳಾ ಬ್ಲಾಕ್‍ಗೆ ಕೈದಿಗಳನ್ನು ವರ್ಗಾಯಿಸುವ ಸರ್ಕಾರಿ ಆದೇಶವನ್ನು ಪ್ರಶ್ನಿಸಿ ಸಖಿ ಮಹಿಳಾ ಸಂಪನ್ಮೂಲ ಕೇಂದ್ರವು ಸಲ್ಲಿಸಿದ ಅರ್ಜಿಗೆ ಈ ಆದೇಶ ನೀಡಲಾಗಿದೆ.
115 ಕೈದಿಗಳ ಸಾಮಥ್ರ್ಯವನ್ನು ಹೊಂದಿರುವ ಅಟ್ಟಕ್ಕುಳಂಗರ ಜೈಲು ಪ್ರಸ್ತುತ 98 ಕೈದಿಗಳನ್ನು ಮಾತ್ರ ಹೊಂದಿದೆ, ಅಗತ್ಯ ಸೌಲಭ್ಯಗಳಿವೆ ಮತ್ತು ಜೈಲು ವರ್ಗಾವಣೆಯ ಅಗತ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.




