HEALTH TIPS

ಸಂಘ ಯಾರನ್ನೂ ನಾಶ ಮಾಡುವುದಿಲ್ಲ, ವ್ಯಕ್ತಿಗಳನ್ನು ನಿರ್ಮಿಸುವ ಕೆಲಸ ಮಾಡುತ್ತದೆ: ಮೋಹನ್ ಭಾಗವತ್

ನವದೆಹಲಿ: ಆರ್‌ ಎಸ್‌ಎಸ್‌ನ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು, ಸಂಘವನ್ನು ಯಾರನ್ನೂ ನಾಶಮಾಡಲು ಸ್ಥಾಪಿಸಲಾಗಿಲ್ಲ, ಬದಲಿಗೆ ಇಡೀ ಸಮಾಜವನ್ನು ಸಂಘಟಿಸಲು ಬಯಸುತ್ತದೆ ಎಂದು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಮಾತನಾಡಿದ ಸಂಘವನ್ನು ಯಾರನ್ನೂ ನಾಶಮಾಡಲು ಸ್ಥಾಪಿಸಲಾಗಿಲ್ಲ ಎಂದರು.

ಭಾರತದಲ್ಲಿ ನಮ್ಮ ಗುರುತು ಹಿಂದೂ. ಹಿಂದೂ ಎಂಬ ಪದ ಎಲ್ಲರನ್ನೂ ಒಗ್ಗೂಡಿಸುತ್ತದೆ. ನಮ್ಮ ರಾಷ್ಟ್ರವು ರಾಜ್ಯದಿಂದಲ್ಲ, ಸಂಸ್ಕೃತಿಯಿಂದ ಒಂದಾಗಿದೆ. ಹಿಂದೆ ಅನೇಕ ರಾಜ್ಯಗಳಿದ್ದಾಗಲೂ ನಾವು ಒಂದೇ ದೇಶವಾಗಿದ್ದೆವು. ವಿದೇಶಿ ಆಳ್ವಿಕೆಯಲ್ಲಿಯೂ ನಾವು ಒಂದೇ ದೇಶವಾಗಿದ್ದೆವು ಎಂದು ಅವರು ಹೇಳಿದರು. ಸಮಾಜದ ಆರೋಗ್ಯಕರ ಸ್ಥಿತಿಯನ್ನು ಸಮಾಜದ ಸಂಘಟನೆ ಎಂದು ವ್ಯಾಖ್ಯಾನಿಸಲಾಗಿದೆ ಎಂದರು.

ಸಂಘದ ಬಗ್ಗೆ ನೇರವಾಗಿ ಅನುಭವಿಸದೆ ಅಭಿಪ್ರಾಯ ರೂಪಿಸಿಕೊಳ್ಳಬಾರದು. ಸಂಘವನ್ನು ಸೇರಿ, ಶಾಖೆಗಳಿಗೆ ಭೇಟಿ ನೀಡಿ, ತಮಗೆ ಸೂಕ್ತವಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇಡೀ ಸಮಾಜವನ್ನು ಸಂಘಟಿಸುವುದು ಸಂಘದ ಉದ್ದೇಶ. ಪ್ರತಿಯೊಬ್ಬರೂ ದೇಶಕ್ಕಾಗಿ ಪ್ರಾಮಾಣಿಕವಾಗಿ ಮತ್ತು ನಿಸ್ವಾರ್ಥವಾಗಿ ಬದುಕಬೇಕು ಎಂದು ಹೇಳಿದರು. ಸಂಘದ 100 ವರ್ಷಗಳ ಪಯಣದ ಕಾರ್ಯಕ್ರಮಗಳು ಕೇವಲ ಆಚರಣೆಯಲ್ಲ, ಬದಲಿಗೆ ಭವಿಷ್ಯದ ದೃಷ್ಟಿಕೋನ ಮತ್ತು ಅದರ ವಿಸ್ತರಣೆಯಾಗಿದೆ ಎಂದರು.

ರಾಷ್ಟ್ರವನ್ನು ಸಮೃದ್ಧಗೊಳಿಸುವುದು ಮತ್ತು ವಿಶ್ವ ನಾಯಕನನ್ನಾಗಿ ಮಾಡುವುದು ಯಾವುದೇ ಒಬ್ಬ ವ್ಯಕ್ತಿಯ ಶಕ್ತಿಗೆ ಮೀರಿದ್ದು. ನಾಯಕರು, ಘೋಷಣೆಗಳು, ನೀತಿಗಳು, ಪಕ್ಷಗಳು, ಸರ್ಕಾರಗಳು, ವಿಚಾರಗಳು, ಮಹಾಪುರುಷರು, ಅವತಾರಗಳು ಮತ್ತು ಸಂಘದಂತಹ ಸಂಘಟನೆಗಳು ಸಹಾಯಕವಾಗಬಹುದು. ಆದರೆ ಅವು ಮೂಲ ಕಾರಣವಾಗಲು ಸಾಧ್ಯವಿಲ್ಲ. ಇದು ಎಲ್ಲರ ಕೆಲಸ, ಮತ್ತು ಇದಕ್ಕಾಗಿ ಎಲ್ಲರನ್ನೂ ಜೊತೆಗೆ ಕರೆದೊಯ್ಯಬೇಕು ಎಂದು ಅವರು ಹೇಳಿದರು. ಆರ್‌ಎಸ್‌ಎಸ್‌ ಒಂದೇ ಸಮಸ್ಯೆಯ ಮೇಲೆ ಸ್ಥಾಪನೆಯಾಗಿಲ್ಲ.

1500 ವರ್ಷಗಳಿಂದ ಸಮಾಜದಲ್ಲಿ ಬೇರೂರಿದ್ದ ಕೆಡುಕುಗಳನ್ನು ಹೋಗಲಾಡಿಸುವುದು ಅಗತ್ಯ ಎಂದು ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರು ಭಾವಿಸಿದ್ದರು. ಇಡೀ ಹಿಂದೂ ಸಮಾಜವನ್ನು ಸಂಘಟಿಸದೆ ಭಾರತವು ಈ ದೀರ್ಘಕಾಲದ ಕಾಯಿಲೆಯಿಂದ ಮುಕ್ತವಾಗುವುದಿಲ್ಲ ಎಂದು ಅರಿತುಕೊಂಡರು. ಆದ್ದರಿಂದ, ಒಂದು ದಶಕದ ಚಿಂತನೆ ಮತ್ತು ಪ್ರಯೋಗದ ನಂತರ, ಅವರು ಆರ್‌ಎಸ್‌ಎಸ್‌ ಅನ್ನು ಸ್ಥಾಪಿಸಿದರು ಎಂದು ಮೋಹನ್ ಭಾಗವತ್ ವಿವರಿಸಿದರು.

ಸಂಘ ವ್ಯಕ್ತಿಗಳನ್ನು ನಿರ್ಮಿಸುವ ಕೆಲಸ ಮಾಡುತ್ತದೆ. ಇದು ಸ್ವಯಂಸೇವಕರನ್ನು ಸಂಘಟಿಸಿ ಸಿದ್ಧಪಡಿಸುತ್ತದೆ. ಮತ್ತು ಸ್ವಯಂಸೇವಕರು ಉಳಿದ ಕೆಲಸವನ್ನು ಮಾಡುತ್ತಾರೆ ಎಂದರು. ಸಂಘದ ಮುಂದಿನ ಹಂತದ ಕೆಲಸದ ಬಗ್ಗೆ ಮಾತನಾಡಿದ ಭಾಗವತ್, ಇಡೀ ಸಮಾಜವು ದೇಶದ ಹಿತಾಸಕ್ತಿಯಲ್ಲಿ ಬದುಕಬೇಕು, ಒಗ್ಗೂಡಿ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಬೇಕು, ಇದರಿಂದ ನಾವು ಪರಸ್ಪರ ಅಡ್ಡಿಯಾಗದೆ ಪೂರಕವಾಗುತ್ತೇವೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries