ಉಪ್ಪಳ: ಕುರ್ಚಿಪಳ್ಳ ಸರ್ಕಾರಿ ಹಿಂದೂಸ್ಥಾನಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಿಗೆ ನ.4 ರಿಂದ ಡಿ.4ರ ತನಕ ಬಿ.ಎಲ್.ಒ.ಕರ್ತವ್ಯದ ಹಿನ್ನೆಲೆಯಲ್ಲಿ ತೆರವಾಗುವ ಎರಡು ಎಲ್.ಪಿ.ಎಸ್.ಟಿ. ಕನ್ನಡ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿಗಾಗಿ ನ.11 ರಂದು ಬೆಳಿಗ್ಗೆ 10.30ಕ್ಕೆ ಸಂದರ್ಶನ ನಡೆಸಲಾಗುವುದು. ಆಸಕ್ತರು ಸಂಬಂಧಿಸಿದ ಎಲ್ಲಾ ದಾಖಲೆಗಳೊಮದಿಗೆ ಶಾಲಾ ಕಾರ್ಯಾಲಯದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಮುಖ್ಯೋಪಾಧ್ಯಾಯರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೂರಂಬೈಲು ಶಾಲೆಯಲ್ಲಿ ಸಂದರ್ಶನ
ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಲಿ ಇರುವ ಎಫ್ ಟಿ ಎಂ ಹುದ್ದೆಗೆ ದಿನವೇತನ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿಗಾಗಿ ಸಂದರ್ಶನ ನ.10 ರಂದು ಸೋಮವಾರ ಪೂರ್ವಾಹ್ನ 10.30ಕ್ಕೆ ಶಾಲಾ ಕಛೇರಿಯಲ್ಲಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಅಸಲಿ ದಾಖಲೆ ಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದೆಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ - 9495094859




