HEALTH TIPS

ಚೀನಾದಲ್ಲಿ ರಾಮಾಯಣ ನೃತ್ಯ-ನಾಟಕ ಪ್ರದರ್ಶನ

 ಬೀಜಿಂಗ್‌: ಚೀನಾದ ವಿದ್ವಾಂಸ ದಿವಂಗತ ಜಿ ಕ್ಸಿಯಾನ್ಲಿನ್‌ ಅವರು ಅನುವಾದ ಮಾಡಿರುವ ರಾಮಾಯಣ ಆಧಾರಿತ ನೃತ್ಯ-ನಾಟಕ 'ಆದಿ ಕಾವ್ಯ- ದಿ ಫಸ್ಟ್‌ ಪೋಯಂ' ಅನ್ನು ಚೀನಾದ ಕಲಾವಿದರ ತಂಡ ಪ್ರಸ್ತುತಪಡಿಸಿತು.


ಇಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ 50 ಚೀನಿ ಕಲಾವಿದರು ನೃತ್ಯವನ್ನು ಪ್ರದರ್ಶಿಸಿದರು.

ಚೀನಾದ ಭರತನಾಟ್ಯ ಕಲಾವಿದ ಜಿನ್‌ ಶಾನ್ಶಾನ್‌ ಅವರು ಈ ನೃತ್ಯವನ್ನು ಸಂಯೋಜಿಸಿದ್ದಾರೆ.

'ಇದೊಂದು ಅದ್ಭುತ ಸಾಂಸ್ಕೃತಿಕ ಸಂಗಮ' ಎಂದು ಭಾರತೀಯ ರಾಯಭಾರ ಕಚೇರಿಯು ವರ್ಣಿಸಿದೆ.

'ಭಾರತೀಯ ತಾತ್ವಿಕ ಸಂಪ್ರದಾಯಗಳ ಸಂಗಮ' ಎಂಬ ವಿಚಾರ ಸಂಕಿರಣವನ್ನು ರಾಯಭಾರ ಕಚೇರಿಯು ಕಳೆದ ತಿಂಗಳು ಆಯೋಜಿಸಿತ್ತು. ಈ ವೇಳೆ ಚೀನಾದ ವಿದ್ವಾಂಸರು ಭಗವದ್ಗೀತೆ ಹಾಗೂ ಭಾರತೀಯ ನಾಗರೀಕತೆಯ ಮೌಲ್ಯಗಳ ಕುರಿತು ಮಾತನಾಡಿದ್ದರು.  






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries