ತ್ರಿಶೂರ್: ಕೇರಳದಲ್ಲಿ ಚಿನ್ನ ಖರೀದಿಸಲು ಮೊದಲ ಎಟಿಎಂ ನ್ನು ಬೊಚೆ(ಬಾಬಿ ಚೆಮ್ಮನ್ನೂರು) ಸ್ಥಾಪಿಸಿರುವರು. ತ್ರಿಶೂರ್ ರೌಂಡ್‍ನಲ್ಲಿರುವ ಬಾಬಿ ಚೆಮ್ಮನೂರು ಇಂಟನ್ರ್ಯಾಷನಲ್ ಗ್ರೂಪ್‍ನ ಕಾರ್ಪೋರೇಟ್ ಕಚೇರಿಯಲ್ಲಿ ಸ್ಥಾಪಿಸಲಾದ ಎಟಿಎಂ ಅನ್ನು 812 ಕಿ.ಮೀ. ರನ್ ಯುನಿಕ್ ವಲ್ರ್ಡ್ ರೆಕಾರ್ಡ್ ಹೋಲ್ಡರ್ ಮತ್ತು ವಿಶ್ವ ಶಾಂತಿಗಾಗಿ ಗಿನ್ನೆಸ್ ವಲ್ರ್ಡ್ ರೆಕಾರ್ಡ್ ವಿಜೇತ ಮತ್ತು ಸಾಯಿ ತರುಜ್ (ಎಂ.ಡಿ., ಸಿಇಒ, ಗೋಲ್ಡ್ ಸಿಕಾ ಲಿಮಿಟೆಡ್) ಉದ್ಘಾಟಿಸಿದರು.
ಡಾ. ಜಿ.ಎಸ್. ಮೂರ್ತಿ (ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರು, ಅಟ್ಡೆಕ್ಸ್ಟ್ ಗ್ರೂಪ್) ಎಟಿಎಂನಿಂದ ಚಿನ್ನದ ನಾಣ್ಯವನ್ನು ಖರೀದಿಸುವ ಮೂಲಕ ಮೊದಲ ವಹಿವಾಟು ನಡೆಸಿದರು. ಡಾ. ಸಂಜಯ್ ಜಾರ್ಜ್ (ಸಿಇಒ, ಬಾಬಿ ಚೆಮ್ಮನೂರು ಇಂಟನ್ರ್ಯಾಷನಲ್ ಗ್ರೂಪ್), ಅಂಬಿಕಾ ಬರ್ಮನ್ (ಅಧ್ಯಕ್ಷರು, ಗೋಪಾಲ್ ಶರ್ಮಾ), ಗೋಪಾಲ್ ಶರ್ಮಾ (ನಿರ್ದೇಶಕರು, ಗೋಲ್ಡ್ ಸಿಕಾ ಲಿಮಿಟೆಡ್), ಹಫ್ಸಾ ತರುಜ್ (ಸಿಇಒ, ಕ್ಸುಗ್ ಟೆಕ್ನಾಲಜೀಸ್) ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಟಿಎಂ ಮೂಲಕ ಚಿನ್ನ ಮತ್ತು ಬೆಳ್ಳಿ ನಾಣ್ಯಗಳು ಲಭ್ಯವಿದೆ. ಎಟಿಎಂ ಅನ್ನು ಹೈದರಾಬಾದ್‍ನ ಗೋಲ್ಡ್ ಸಿಕಾ ಪ್ರೈವೇಟ್ ಲಿಮಿಟೆಡ್ ತಯಾರಿಸಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಎಟಿಎಂನಿಂದ 0.5 ಗ್ರಾಂ ನಿಂದ ಪ್ರಾರಂಭವಾಗುವ ನಾಣ್ಯಗಳನ್ನು ಪಡೆಯಬಹುದು. ಬೊಚೆ ಗೋಲ್ಡ್ & ಡೈಮಂಡ್ ಎಟಿಎಂ ಮೂಲಕ ಚಿನ್ನ/ಬೆಳ್ಳಿ ನಾಣ್ಯಗಳನ್ನು ಉಡುಗೊರೆಯಾಗಿ ಮತ್ತು ಹೂಡಿಕೆಯಾಗಿ ಸುಲಭವಾಗಿ ಪಡೆಯಬಹುದು.




