ಕೋಝಿಕೋಡ್ ∙ ಕೊಯಿಲಾಂಡಿ ಶಾಸಕಿ ಕಾನತ್ತಿಲ್ ಜಮೀಲಾ (59) ಇಂದು ಸಂಜೆ ನಿಧನರಾಗಿದ್ದಾರೆ. ಕಳೆದ ಆರು ತಿಂಗಳಿನಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ನಿಧನರಾದರು. 2005 ರಲ್ಲಿ ಚೆಳನ್ನೂರ್ ಬ್ಲಾಕ್ ಪಂಚಾಯತ್ ಅಧ್ಯಕ್ಷರಾಗಿದ್ದರು. ಬಳಿಕ 2010 ರಿಂದ 2020 ರ ವರೆಗೆ ಕೋಝಿಕೋಡ್ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರು.
ಅವರು 2021 ರಲ್ಲಿ ಕೊಯಿಲಾಂಡಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಕಾಂಗ್ರೆಸ್ ಅಭ್ಯರ್ಥಿ ಎನ್. ಸುಬ್ರಮಣಿಯನ್ ಅವರನ್ನು 8472 ಮತಗಳಿಂದ ಪರಾಭವಗೊಳಿಸಿ ಶಾಸಕಿಯಾದರು. ಅವರಿ ಚೋಯಿಕುಳಂ ಮೂಲದವರು. ಅವರು ತಮ್ಮ ಪತಿ ಕಾನತಿಲ್ ಅಬ್ದುರಹ್ಮಾನ್ ಮತ್ತು ಮಕ್ಕಳಾ ಐರೀಜ್ ರೆಹಮಾನ್ ಮತ್ತು ಅನುಜಾ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಜನಪರ ಕಾಳಜಿಯ ಮೂಲಕ ಗುರುತಿಸಿಕೊಂಡಿದ್ದ ಜಮೀಲಾ ಶಿಕ್ಷಕಿಯಾಗಿದ್ದು ಬಳಿಕ ರಾಜಕೀಯ ಪ್ರವೇಶಿಸಿ ಸಿಪಿಎಂನಲ್ಲಿ ಭ್ರಷ್ಟಾಚಾರ ರಹಿತ ಶುದ್ದ ಹಸ್ತದ ರಾಜಕಾರಣಿಯಾಗಿದ್ದರು.




