ನವದೆಹಲಿ:: ರಾಷ್ಟ್ರ ರಾಜಧಾನಿ ದೆಹಲಿಯು ಗುರುವಾರ ಮತ್ತೊಂದು ಸ್ಪೋಟಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಮಹಿಪಾಲ್ಪುರ ಪ್ರದೇಶದ ರಾಡಿಸನ್ ಹೋಟೆಲ್ ಬಳಿ ಸ್ಫೋಟದ ಶಬ್ದ ಕೇಳಿಸಿದೆ. ಇಂದು ಬೆಳಗ್ಗೆ ಬೆಳಿಗ್ಗೆ 9:18 ಕ್ಕೆ ಸ್ಪೋಟ ಸಂಭವಿಸಿದ್ದು, ಇದು ಬಾಂಬ್ ಸ್ಪೋಟವೇ ಆಗಿರಬಹುದೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಪೊಲೀಸ್ ತಂಡಗಳು ತೆರಳಿದ್ದು, ತನಿಖೆ ಎಲ್ಲಿಂದ ಆಯಿತು, ಹೇಗಾಯಿತು ಎಂಬ ತುರ್ತು ತನಿಖೆ ಆರಂಭಿಸಿದ್ದಾರೆ.
ಇಂದು ಬೆಳಗ್ಗೆ ಸ್ಪೋಟ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿವೆ. ಪೊಲೀಸರು, ಬಾಂಬ್ ಸ್ಕ್ವಾಡ್ ಸೇರಿದಂತೆ ಅಗತ್ಯ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದಾರೆ. ನಂತರ ದೆಹಲಿ ಪೊಲೀಸರು ಪ್ರದೇಶವನ್ನು ಪರಿಶೀಲಿಸಿದಾಗ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ದೃಢಪಡಿಸಿದ್ದಾರೆ.
ದೆಹಲಿ ಕೆಂಪು ಕೋಟೆ ಸ್ಫೋಟ
ಇತ್ತೀಚೆಗೆ ದೆಹಲಿಯ ಕೆಂಪು ಕೋಟೆ ಬಳಿ ಮೆಟ್ರೋ ನಿಲ್ದಾಣದ ಹತ್ತಿರ ಕನಿಷ್ಠ 12 ಜನರು ಸಾವಿಗೆ ಬೃಹತ್ ಬಾಂಬ್ ಸ್ಪೋಟ್ ಸಂಭವಿಸಿತ್ತು. ಹತ್ತಾರು ಮಂದಿ ಗಾಯಗೊಂಡರು. ದೆಹಲಿಯ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ನಡೆದ ಸ್ಪೋಟ ಇದಾಗಿತ್ತು. ಹುಂಡೈ ಐ20 ಕಾರು ಸ್ಪೋಟಗೊಂಡಿದೆ. ಅದರಲ್ಲಿ ಸ್ಪೋಟಕಗಳು ಇದ್ದವು. ಇದರಿಂದ ಹಿಂದೆ ನಕ್ಸಲರ ಕೈವಾಡ ಇದೆ ಎಂಬ ಶಂಕೆ ಮೇರೆಗೆ ತನಿಖೆ ನಡೆದಿದೆ.
ಭಯೋತ್ಪಾದಕರ ಸರಣಿ ಕೃತ್ಯದ ಭಾಗವಿದೆ: ತನಿಖೆ
ಸ್ಪೋಟದ ತೀವ್ರತೆಗೆ ಮೆಟ್ರೋ ನಿಲ್ದಾಣದ ಬಳಿ ಇದ್ದ ಅಂಗಡಿ ಮುಂಗಟ್ಟುಗಳು, ಅಕ್ಕಪಕ್ಕದ ವಾಹನಗಳು ಹಾನಿಗೀಡಾಗಿವೆ. ಈ ಹಿಂದಿನ ಸರಣಿ ಬಾಂಬ್ ಸ್ಪೋಟಗಳನ್ನು ಹೋಲುವಂತಿದೆ. ಭಯೋತ್ಪಾದಕರ ಸರಣಿ ದಾಳಿಯನ್ನು ಇದು ಸೂಚಿತ್ತಿದೆ. ಈ ಘಟನೆ ಹಿಂದೆ ಸುಮಾರು ಎಂಟು ಮಂದಿ ಭಯೋತ್ಪಾದಕರ ಕೈವಾಡ ಇದೆ ಎಂದು ದೇಶದ ಗುಪ್ತಚರ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಅದರ ಜಾಡಿ ಹಿಡಿದು ತನಿಖೆ ವೇಗವಾಗಿ ಸಾಗಿದೆ.
ಈ ಸ್ಪೋಟದ ರೂವಾರಿಗಳು ಪೊಲೀಸರಿಗೆ, ರಕ್ಷಣಾ ಇಲಾಖೆಗೆ ಗೊತ್ತಾಗದಂತೆ ಮಾಡಲು ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳ ಮೂಲಕ ಸಂವಹನ ನಡೆಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಸ್ಫೋಟಕ ವಸ್ತುಗಳ ಬಗ್ಗೆ ನೇರವಾಗಿ ಮಾತನಾಡದೇ, ಉಲ್ಲೇಖಿಸದೇ ಪಾಪಿಗಳು "ಶಿಪ್‌ಮೆಂಟ್‌ಗಳು" ಮತ್ತು "ಪ್ಯಾಕೇಜ್" ಎಂದು ಕೋಡ್ ವರ್ಡ್ ಬಳಸುತ್ತಿದ್ದರು ಎಂಬುದನ್ನು ಪತ್ತೆ ಮಾಡಲಾಗಿದೆ.




