HEALTH TIPS

ದೇಶದಾದ್ಯಂತ ವೈರಾಣು ಸೋಂಕು ಪ್ರಕರಣ ಹೆಚ್ಚಳ: ICMR ವರದಿ

ನವದೆಹಲಿ(PTI): ದೇಶದ ಜನರಲ್ಲಿ ವೈರಾಣು ಸೋಂಕಿನ ಪ್ರಕರಣಗಳು 2025ರ ಅವಧಿಯಲ್ಲಿ ಹೆಚ್ಚಾಗಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್‌) ಅಡಿ ಬರುವ ಎಲ್ಲ ಪ್ರಯೋಗಾಲಯಗಳಲ್ಲಿ ದೇಶದಾದ್ಯಂತ 4.5 ಲಕ್ಷ ರೋಗಿಗಳನ್ನು ಪರೀಕ್ಷಿಸಲಾಗಿದೆ. ಇವರಲ್ಲಿ ಶೇ 11.1ರಷ್ಟು ಮಂದಿಯಲ್ಲಿ ರೋಗಕಾರಕ ವೈರಾಣುಗಳು ಪತ್ತೆಯಾಗಿವೆ.

ಈ ಬಗ್ಗೆ ಐಸಿಎಂಆರ್‌ ಇತ್ತೀಚೆಗೆ ವರದಿ ಬಿಡುಗಡೆ ಮಾಡಿದೆ. ಪ್ರತೀ ವರ್ಷವು ಐಸಿಎಂಆರ್ ಇಂಥ ಪರೀಕ್ಷೆಗಳನ್ನು ನಡೆಸುತ್ತದೆ

ಶೇ 0.8 ಅಂಶಗಳಷ್ಟು ಏರಿಕೆ

ಅವಧಿ;ಮಾದರಿಗಳ ಸಂಖ್ಯೆ;ಸೋಂಕಿನ ಪ್ರಕರಣಗಳು;ಸೋಂಕು ಹರಡುವಿಕೆ ಪ್ರಮಾಣ

ಜನವರಿಯಿಂದ ಮಾರ್ಚ್‌;2.28 ಲಕ್ಷ;24,502;ಶೇ 10.7

ಏಪ್ರಿಲ್‌ನಿಂದ ಜೂನ್‌;2.26 ಲಕ್ಷ;26,055;ಶೇ 11.5

ಪ್ರಮುಖ ರೋಗಕಾರಕ ವೈರಾಣು

1. ತೀವ್ರ/ಸಾಮಾನ್ಯ ಉಸಿರಾಟ ಸಂಬಂಧಿ ಸೋಂಕಿನಲ್ಲಿ ಇನ್‌ಫ್ಲುಯನ್ಝಾ ಪತ್ತೆ

2. ತೀವ್ರ ಜ್ವರ ಪ್ರಕರಣಗಳಲ್ಲಿ ಡೆಂಗಿ ಸೋಂಕು ಮತ್ತು ತೀವ್ರ ರಕ್ತಸ್ರಾವ ಆಗುವುದು ಪತ್ತೆ

3. ಜಾಂಡೀಸ್‌ ಪ್ರಕರಣಗಳಲ್ಲಿ ಹೆಪಟೈಟೀಸ್‌ ಎ ಪತ್ತೆ

4. ಅತಿಸಾರ ಪ್ರಕರಣಗಳಲ್ಲಿ ನೋರೊವೈರಸ್‌ ಪತ್ತೆ

5. ಮಿದುಳಿನ ತೀವ್ರ ಉರಿಯೂತ ಪ್ರಕರಣಗಳಲ್ಲಿ ಹರ್ಪಿಸ್‌ ಸಿಂಪ್ಲೆಕ್ಸ್‌ ವೈರಾಣು ಪತ್ತೆ

'ಎಚ್ಚರಿಕೆ ಗಂಟೆ'ಹಿರಿಯ ವಿಜ್ಞಾನಿಗಳುವೈರಾಣು ಹರಡುವಿಕೆಯ ಪ್ರಮಾಣದ ಏರಿಕೆಯು ದೊಡ್ಡ ಮಟ್ಟದಲ್ಲಿ ಇಲ್ಲ. ಆದರೂ ಇದನ್ನು ಕಡೆಗಣಿಸಲು ಸಾಧ್ಯವಿಲ್ಲ. ಇದೇ ರೀತಿ ತ್ರೈಮಾಸಿಕದ ಅವಧಿಯಲ್ಲಿ ಇಂಥ ಪರಿಶೀಲನೆಗಳನ್ನು ನಡೆಸಿದರೆ, ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು

'ಎಚ್ಚರಿಕೆ ಗಂಟೆ'

ಒಂದು ರೋಗವು ಪ್ರತಿ ವರ್ಷವೂ ಅದೇ ಅವಧಿಯಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಹರಡಿಕೊಂಡರೆ, ಅದನ್ನು 'ರೋಗ ವಲಯ' ಎನ್ನಲಾಗುವುದು. ಏಪ್ರಿಲ್‌ನಿಂದ ಜೂನ್‌ವರಗೆ ಇಂಥ 191 ವಲಯಗಳನ್ನು ಪತ್ತೆ ಮಾಡಲಾಗಿದೆ. ಜನವರಿಯಿಂದ ಮಾರ್ಚ್‌ವರೆಗೆ ಇಂಥ 389 ವಲಯಗಳನ್ನು ಪತ್ತೆ ಮಾಡಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries