HEALTH TIPS

ಕೇರಳ | ಸಾರ್ವಜನಿಕವಾಗಿ ನಗ್ನತೆ ಪ್ರದರ್ಶನ: SIRನಿಂದ ಬಿಎಲ್‌ಒ ತೆರವುಗೊಳಿಸಿ ಕ್ರಮ

ಮಲಪ್ಪುರಂ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಸಂದರ್ಭದಲ್ಲಿ ಸಾರ್ವಜನಿಕವಾಗಿ ನಗ್ನತೆ ಪ್ರದರ್ಶಿಸಿದ ಆರೋಪದಡಿ ಕೇರಳದ ಉತ್ತರ ಭಾಗದ ತವನೂರ್ ಮಂಡಳದ ಬೂತ್‌ ಮಟ್ಟದ ಅಧಿಕಾರಿಯನ್ನು ಚುನಾವಣಾ ಕರ್ತವ್ಯದಿಂದ ತೆರವುಗೊಳಿಸಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತವು, ಬಿಎಲ್‌ಒಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ಘಟನೆಯು ಕಳೆದ ವಾರದ ನಡೆದಿದೆ. ಇದರ ವಿಡಿಯೊವನ್ನು ಕೆಲ ಟಿ.ವಿ. ವಾಹಿನಿಗಳು ಪ್ರಸಾರ ಮಾಡಿದ್ದವು. ದೃಶ್ಯದಲ್ಲಿ ಮತದಾರರಿಗೆ ಅರ್ಜಿ ನೀಡಿದ ವ್ಯಕ್ತಿ ತಕ್ಷಣ ತನ್ನ ಲುಂಗಿಯನ್ನು ಬಿಚ್ಚಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಯರನ್ನೂ ಒಳಗೊಂಡು ಬಹಳಷ್ಟು ಜನರಲ್ಲಿ ಅಲ್ಲಿ ಸೇರಿದ್ದರು.

ನ. 23ರಂದು ಈ ವಿಷಯವು ಚುನಾವಣಾ ನೋಂದಣಿ ಅಧಿಕಾರಿ ಗಮನಕ್ಕೆ ಬಂದಿತು. ಜಿಲ್ಲಾಧಿಕಾರಿ ವಿ.ಆರ್. ವಿನೋದ್ ಅವರು ನಗ್ನತೆ ಪ್ರದರ್ಶಿಸಿದ ವ್ಯಕ್ತಿಯನ್ನು ತಕ್ಷಣದಿಂದ ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ. ಮತ್ತೊಬ್ಬ ಅಧಿಕಾರಿಯನ್ನು ಬಿಎಲ್‌ಒ ಆಗಿ ನೇಮಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries