HEALTH TIPS

ಇಂಡಿಗೋ ಬಿಕ್ಕಟ್ಟು: ಸ್ಪೈಸ್‌ಜೆಟ್‌ನಿಂದ ಪ್ರತಿದಿನ 100 ಹೆಚ್ಚುವರಿ ವಿಮಾನ ಹಾರಾಟ!

ನವದೆಹಲಿ: ಭಾರತದ ದೇಶೀಯ ವಿಮಾನಯಾನ ಸಂಸ್ಥೆಯಾದ ಸ್ಪೈಸ್‌ಜೆಟ್ ಸದ್ಯ ಚಳಿಗಾಲದ ವೇಳಾಪಟ್ಟಿಯಲ್ಲಿ ಪ್ರತಿದಿನ 100 ಹೆಚ್ಚುವರಿ ವಿಮಾನಗಳನ್ನು ಸೇರಿಸಲು ಯೋಜಿಸಿದೆ. ಇಂಡಿಗೋ ವಿಮಾನ ಸೇವೆಯಲ್ಲಿನ ಅಡಚಣೆಯ ನಡುವೆ ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ವಾಯುಯಾನ ಮಾರುಕಟ್ಟೆಯಲ್ಲಿ ತನ್ನ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳುವ ಗುರಿಯನ್ನು ಇದುಹೊಂದಿದೆ.

ಈ ಚಳಿಗಾಲದಲ್ಲಿ ಪ್ರಮುಖ ಮಾರ್ಗಗಳಲ್ಲಿ ವಿಮಾನ ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ತನ್ನ ಯೋಜನೆಯ ಭಾಗವಾಗಿ ವಿಮಾನಯಾನ ಸಂಸ್ಥೆಯು ಪ್ರತಿದಿನ 100 ಹೆಚ್ಚುವರಿ ವಿಮಾನಗಳ ಸಂಚಾರವನ್ನು ಪ್ರಾರಂಭಿಸುತ್ತಿರುವುದಾಗಿ ಸ್ಪೈಸ್‌ಜೆಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

'ಈ ಚಳಿಗಾಲದಲ್ಲಿ ಪ್ರಮುಖ ಮಾರ್ಗಗಳಲ್ಲಿ ಹೆಚ್ಚಿನ ಜನರಿಂದ ನಾವು ಬಲವಾದ ಮತ್ತು ಬೆಳೆಯುತ್ತಿರುವ ಬೇಡಿಕೆಯನ್ನು ಕಾಣುತ್ತಿದ್ದೇವೆ ಮತ್ತು ಭಾರತದ ವಾಯುಯಾನ ಮಾರುಕಟ್ಟೆಯಲ್ಲಿ ಸಾಕಷ್ಟು ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ನಮ್ಮ ವಿಮಾನಗಳ ಕಾರ್ಯಾಚರಣೆಗಳನ್ನು ಹೆಚ್ಚಿಸಲು ಎದುರು ನೋಡುತ್ತಿದ್ದೇವೆ. ಈ ಪ್ರಯತ್ನದ ಭಾಗವಾಗಿ, ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟು ಪ್ರತಿದಿನ 100 ಹೆಚ್ಚುವರಿ ವಿಮಾನಗಳ ಹಾರಾಟವನ್ನು ಪರಿಚಯಿಸಲು ನಾವು ಯೋಜಿಸಿದ್ದೇವೆ' ಎಂದು ಸ್ಪೈಸ್‌ಜೆಟ್ ಹೇಳಿದೆ.

ವಿಮಾನಯಾನ ಸಂಸ್ಥೆಯು 17 ವಿಮಾನಗಳನ್ನು ಮತ್ತೆ ಸಕ್ರಿಯ ಸೇವೆಗೆ ತಂದಿದೆ. ಈ ಪೈಕಿ ಕೆಲವು ಭಾಗಶಃ ಸಿಬ್ಬಂದಿಯೊಂದಿಗೆ ಗುತ್ತಿಗೆ (damp-leased) ಪಡೆದ ವಿಮಾನಗಳು ಸೇರಿವೆ. ಈ ಮೂಲಕ, ಅನೇಕ ಪ್ರಯಾಣಿಕರು ಪ್ರಯಾಣಿಸಲು ಬಯಸುವ ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುವುದು ನಮ್ಮ ಗುರಿಯಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

'ಕಳೆದ ಎರಡು ತಿಂಗಳುಗಳಲ್ಲಿ, ನಾವು ಗುತ್ತಿಗೆ ವಿಮಾನಗಳ ಮಿಶ್ರಣ ಮತ್ತು ನಮ್ಮ ಸ್ವಂತ ವಿಮಾನವನ್ನು ಸೇವೆಗೆ ಹಿಂದಿರುಗಿಸುವ ಮೂಲಕ 17 ವಿಮಾನಗಳನ್ನು ಸಕ್ರಿಯ ಕಾರ್ಯಾಚರಣೆಗಳಿಗೆ ಸೇರಿಸಿಕೊಂಡಿದ್ದೇವೆ. ಇದು ಬೇಡಿಕೆ ಇರುವ ಕಡೆಗಳಲ್ಲಿ ಸಾಮರ್ಥ್ಯವನ್ನು ಸರಿಪಡಿಸಲು ಮತ್ತು ಒಟ್ಟಾರೆ ನೆಟ್‌ವರ್ಕ್ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ನಮಗೆ ನೆರವಾಗುತ್ತದೆ. ಸದ್ಯದ ವೇಳಾಪಟ್ಟಿಯಲ್ಲಿ ಇನ್ನೂ ಹಲವಾರು ವಿಮಾನಗಳನ್ನು ಕಾರ್ಯಾಚರಣೆಯ ಭಾಗವಾಗಿಸುವುದರ ಮೇಲೆ, ವಿಮಾನ ಬಳಕೆಯನ್ನು ಗರಿಷ್ಠಗೊಳಿಸುವುದು ಮತ್ತು ಉತ್ತಮ ಯೋಜನೆಯ ಮೂಲಕ ಸಂಪರ್ಕವನ್ನು ಬಲಪಡಿಸುವುದರ ಮೇಲೆ ನಮ್ಮ ಗಮನವಿದೆ' ಎಂದು ಸ್ಪೈಸ್‌ಜೆಟ್ ಸೇರಿಸಿದೆ.

ಇತ್ತೀಚೆಗೆ ಇಂಡಿಗೋ ಬಿಕ್ಕಟ್ಟಿನಿಂದ ಉಂಟಾದ ಅಡಚಣೆಗಳ ನಂತರ ವಿಮಾನ ಕಾರ್ಯಾಚರಣೆಗಳು ಸಾಮಾನ್ಯ ಸ್ಥಿತಿಗೆ ಮರಳುತ್ತಿವೆ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಘೋಷಿಸಿದ್ದಾರೆ.

ANIಗೆ ನೀಡಿದ ಸಂದರ್ಶನದಲ್ಲಿ ಸಿನ್ಹಾ, ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ವಿಮಾನ ನಿಲ್ದಾಣಗಳು ಸೇರಿದಂತೆ ವಿವಿಧ ಹಂತಗಳಲ್ಲಿ ಸಮನ್ವಯ ಸಾಧಿಸಿದೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries