ಶಬರಿಮಲೆ: ಮಂಡಲ ಕಾಲದ 18 ದಿನಗಳ ನಂತರ, ಶಬರಿಮಲೆ ತಲುಪಿದ ಒಟ್ಟು ಯಾತ್ರಿಕರ ಸಂಖ್ಯೆ 15 ಲಕ್ಷ ದಾಟಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 1 ರಂದು ಮಧ್ಯಾಹ್ನ 3 ಗಂಟೆಯವರೆಗೆ 14,95,774 ಜನರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಾಗಿಲು ತೆರೆದ ದಿನದ ನಂತರದ ಸಂಖ್ಯೆಯನ್ನು ಸೇರಿಸಿದರೆ, ಭಕ್ತರ ಸಂಖ್ಯೆ 15 ಲಕ್ಷ ದಾಟುತ್ತದೆ. ಬುಧವಾರ ಬೆಳಿಗ್ಗೆ 12 ರಿಂದ ಸಂಜೆ 7 ರವರೆಗೆ ಒಟ್ಟು 66,522 ಜನರು ದೇಗುಲಕ್ಕೆ ಭೇಟಿ ನಿಡಿದ್ದಾರೆ. ಜನದಟ್ಟಣೆ ನಿಯಂತ್ರಣದಲ್ಲಿರುವುದರಿಂದ ಭಕ್ತರು ಶಾಂತಿಯುತ ದರ್ಶನವನ್ನು ಆನಂದಿಸುತ್ತಿದ್ದಾರೆ.
ಆರಂಭಿಕ ದಿನಗಳಲ್ಲಿ, ಅನಿಯಂತ್ರಿತ ಜನದಟ್ಟಣೆ ಕಾರಣ ಸ್ಪಾಟ್ ಬುಕಿಂಗ್ ಅನ್ನು ನಿರ್ಬಂಧಿಸಲಾಗಿತ್ತು. ಮೊದಲು ಬಂದವರಿಗೆ ಮೊದಲು ಸೇವೆ ಸಲ್ಲಿಸುವ ಆಧಾರದ ಮೇಲೆ ಸ್ಪಾಟ್ ಬುಕಿಂಗ್ ಮಾಡಲಾಗುತ್ತದೆ.




