ಜುಬಾ (ಎಪಿ): ದಕ್ಷಿಣ ಸುಡಾನ್‌ನ ಅತಿ ದೊಡ್ಡ ತೈಲ ಸಂಸ್ಕರಣಾ ಘಟಕದ ಸಮೀಪ ಮಂಗಳವಾರ ಸಂಜೆ ಸುಡಾನ್ ಶಸಸ್ತ್ರ ಪಡೆಗಳು ನಡೆಸಿದ ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ದಕ್ಷಿಣ ಸುಡಾನ್‌ನ ಗಡಿಭಾಗ ಹೆಗ್ಲಿಗ್‌ನಲ್ಲಿರುವ ತೈಲ ಸಂಸ್ಕರಣ ಘಟಕವನ್ನು ವಶಕ್ಕೆ ಪಡೆದ ಬೆನ್ನಲ್ಲೇ, ಈ ದಾಳಿ ನಡೆದಿದೆ ಎಂದು 2023ರಿಂದ ಸುಡಾನ್ ಸೇನೆಯ ವಿರುದ್ಧ ಹೋರಾಡುತ್ತಿರುವ ಅರೆಸೇನಾ ಕ್ಷಿಪ್ರ ಕಾರ್ಯಪಡೆ(ಆರ್‌ಎಸ್‌ಎಫ್) ಹೇಳಿದೆ.
ಡ್ರೋನ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಖಚಿತಗೊಂಡಿಲ್ಲ. ಸ್ಥಳೀಯ ಮಾಧ್ಯಮ ವರದಿ ಆಧರಿಸಿ 7 ಮಂದಿ ಬುಡಕಟ್ಟು ಮುಖಂಡರು ಮತ್ತು 12ಕ್ಕೂ ಹೆಚ್ಚು ಆರ್‌ಎಸ್‌ಎಫ್ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಂತರರಾಷ್ಟ್ರೀಯ ನಿಯಮ ಉಲ್ಲಂಘಿಸಿ ಸುಡಾನ್ ಸಶಸ್ತ್ರ ಪಡೆ ದಾಳಿ ನಡೆಸಿದೆ ಎಂದು ಆರ್‌ಎಸ್‌ಎಫ್ ಆರೋಪಿಸಿದೆ. ಆರ್‌ಎಸ್‌ಎಫ್ ಸಿಬ್ಬಂದಿಯನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿರುವುದಾಗಿ ಸುಡಾನ್ ಸೇನಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

