ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನದ ವತಿಯಿಮದ ಕನ್ನಡ ಭವನದ ರಜತ ಸಂಭ್ರಮ-ನಾಡು, ನುಡಿ ಹಬ್ಬ ಕಾರ್ಯಕ್ರಮ ಜ.18ರಂದು ಕನ್ನಡ ಭವನದಲ್ಲಿ ಜರುಗಲಿದೆ.
ಈ ಸಂದರ್ಭ ರಜತ ಸಂಭ್ರಮದ ವಿಶೇಷ 25ಕಾರ್ಯಕ್ರಮಗಳ ಉದ್ಘಾಟನೆ, ಕೃತಿಬಿಡುಗಡೆ-ಕವಿಗೋಷ್ಠಿ-ಕವಿ ಸನ್ಮಾನ ಕಾರ್ಯಕ್ರಮ ನಡೆಯಲಿರುವುದು. ಈ ಸಂದರ್ಭ ಕನ್ನಡಪರ ವಿವಿಧ ಕ್ಷೇತ್ರಗಳ 101ಮಂದಿ ಸಾಧಕರಿಗೆ ಕನ್ನಡಭವನದ ವಿವಿಧ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮ ನಡೆಯುವುದು. ಇದರೊಂದಿಗೆ ಸಾಂಸ್ಕøತಿಕ ನೃತ್ಯ ವೈಭವ, ಯಕ್ಷಗಾನ ಬಯಲಾಟ ಜರುಗಲಿರುವುದು.
ಕೇರಳ ರಾಜ್ಯ ಕನ್ನಡ ಚುಟುಕು ಸಹಿತ್ಯ ಪರಿಷತ್ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿರುವುದು.

