HEALTH TIPS

ಭಾರತದ ಜಿಡಿಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ 2011-12 ಅಲ್ಲ, 2022-23; ಇದರಿಂದೇನು ಪ್ರಯೋಜನ?

ನವದೆಹಲಿ: ಜಿಡಿಪಿ, ಹಣದುಬ್ಬರ, ಔದ್ಯಮಿಕ ಉತ್ಪಾದನಾ ಸೂಚಿಗೆ ಆಧಾರ ವರ್ಷ ಅಥವಾ ಬೇಸ್ ಇಯರ್ ಅನ್ನು ಭಾರತ ಬದಲಿಸುತ್ತಿದೆ. ಈ ಅಂಶಗಳನ್ನು ಒಳಗೊಂಡಿರುವ ಆರ್ಥಿಕ ದತ್ತಾಂಶದ (Macro economic data) ಹೊಸ ಸರಣಿಯನ್ನು 2026ಕ್ಕೆ ಬಿಡುಗಡೆ ಮಾಡಲಿದೆ.

ಈ ಪ್ರಕ್ರಿಯೆಯ ಭಾಗವಾಗಿ ಕೇಂದ್ರ ಯೋಜನಾ ಅನುಷ್ಠಾನ ಮತ್ತು ಸಾಂಖ್ಯಿಕ ಸಚಿವಾಲಯವು ಸಂಬಂಧಪಟ್ಟ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳೊಂದಿಗೆ ಕಾರ್ಯಾಗಾರಗಳನ್ನು ನಡೆಸಲಿದೆ. ದೆಹಲಿಯ ಭಾರತ್ ಮಂಡಪಂ ಅಂಗಣದಲ್ಲಿ ಈ ಬಿಡುಗಡೆ ಪೂರ್ವದ ವರ್ಕ್​ಶಾಪ್ ನಡೆಯಲಿದೆ.

ಹಣದುಬ್ಬರ ಲೆಕ್ಕಾಚಾರಕ್ಕೆ ಆಧಾರ ವರ್ಷವಾಗಿ 2024=100 ಅನ್ನು ಇಡಲಾಗಿದೆ. ನ್ಯಾಷನಲ್ ಅಕೌಂಟ್​ಗಳಿಗೆ 2022-23 ಅನ್ನು ಬೇಸ್ ಇಯರ್ ಆಗಿ ಮಾಡಲಾಗಿದೆ. ಐಐಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ ಆಗಿ 2022-23 ಇದೆ. ಜಿಡಿಪಿಗೆ ಬೇಸ್ ಇಯರ್ ಆಗಿ 2022-23 ಅನ್ನು ಇಡಲಾಗಿದೆ. ಈ ಬದಲಾವಣೆ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ವಿನಿಮಯ ಮತ್ತು ಚರ್ಚೆಗಳು ನಡೆಯುವ ನಿರೀಕ್ಷೆ ಇದೆ.

ಭಾರತದ ಜಿಡಿಪಿ ದರ ಹೆಚ್ಚಲಿದೆಯಾ?

ಭಾರತ ತನ್ನ ಜಿಡಿಪಿ ಲೆಕ್ಕಾಚಾರಕ್ಕೆ ಆಧಾರ ವರ್ಷವಾಗಿ ಬಳಸಲಾಗುತ್ತಿದ್ದ 2004-04 ಅನ್ನು ಇತ್ತೀಚೆಗೆ 2011-12 ಆಗಿ ಬದಲಾಯಿಸಿತ್ತು. ಇದೀಗ 2011-12ರಿಂದ 2022-23ಕ್ಕೆ ಬೇಸ್ ಇಯರ್ ಅನ್ನು ಬದಲಾಯಿಸುವ ಪ್ರಸ್ತಾಪ ಇದೆ. ಬೇಸ್ ಇಯರ್ ಅನ್ನು ಅಪ್​ಡೇಟ್ ಮಾಡುವುದರಿಂದ ಆಗುವ ಅನುಕೂಲವೆಂದರೆ ಇತ್ತೀಚಿನ ವರ್ಷಗಳಲ್ಲಿ ಆದ ಪರಿವರ್ತನೆಗಳನ್ನು ಹಿಡಿದಿಡಲು ಸಾಧ್ಯವಾಗುತ್ತದೆ. ಅಂದರೆ, ಆರ್ಥಿಕ ಚಟುವಟಿಕೆಗಳನ್ನು ಹೆಚ್ಚು ನಿಖರವಾಗಿ ಗುರುತಿಸಬಹುದು.

ಭಾರತವೇನಾದರೂ ತನ್ನ ಬೇಸ್ ಇಯರ್ ಅನ್ನು ಅಪ್​ಡೇಟ್ ಮಾಡಿದರೆ, ದೇಶದ ಜಿಡಿಪಿ ದರ 50ರಿಂದ 100 ಮೂಲಾಂಕಗಳಷ್ಟು ಹೆಚ್ಚುವ ನಿರೀಕ್ಷೆ ಇದೆ. ಭಾರತದ ಒಟ್ಟೂ ಜಿಡಿಪಿ ಸಂಖ್ಯೆ ಹೆಚ್ಚಬಹುದು. ತಲಾದಾಯವೂ ಹೆಚ್ಚಬಹುದು.

ಒಂದು ಅಂದಾಜು ಪ್ರಕಾರ ಜಿಡಿಪಿ ತಲಾದಾಯ 1.96 ಲಕ್ಷ ರೂ ಇದ್ದು, ಇದು 2.15 ಲಕ್ಷ ರೂಗೆ ಹೆಚ್ಚಬಹುದು. ಇದು ಇನ್ನೂ ಸ್ವಲ್ಪ ಹೆಚ್ಚಾದರೆ, ವಿಶ್ವಬ್ಯಾಂಕ್​ನ ಮೇಲ್ಮಟ್ಟದ ಮಧ್ಯಮ ಆದಾಯ ಗುಂಪಿಗೆ ಭಾರತ ಸೇರ್ಪಡೆಯಾಗಲು ಸಾಧ್ಯವಾಗುತ್ತದೆ. ಭಾರತದ ಆರ್ಥಿಕತೆಯ ಗಾತ್ರ ಸುಮಾರು 4.4 ಟ್ರಿಲಿಯನ್ ಡಾಲರ್ ಆಗಬಹುದು. ಹಾಗಾದಲ್ಲಿ ಜಪಾನ್ ಅನ್ನು ಹಿಂದಿಕ್ಕಿ ಭಾರತವು ನಂ. 4 ಎನಿಸಬಹುದು. ಜರ್ಮನಿಯ 5 ಟ್ರಿಲಿಯನ್ ಡಾಲರ್ ಗಾತ್ರವನ್ನು ಮುಟ್ಟುವುದು ಭಾರತಕ್ಕೆ ಹೆಚ್ಚು ಕಾಲ ಬೇಕಾಗುವುದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries