HEALTH TIPS

ಅಯೋಧ್ಯೆಯ ನೂತನ ಮಸೀದಿ ನಿರ್ಮಾಣ ಯೋಜನೆ 2026ರಲ್ಲಿ ಆರಂಭ ಸಾಧ್ಯತೆ: IICF

ಲಕ್ನೋ: 1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಸಂಘಪರಿವಾರದ ಬೆಂಬಲಿಗರಿಂದ ಧ್ವಂಸಗೊಂಡ 33 ವರ್ಷಗಳ ಬಳಿಕ ಅಯೋಧ್ಯೆಯಿಂದ 25 ಕಿ.ಮೀ. ದೂರದ ಧನ್ನಿಪುರ ಗ್ರಾಮದಲ್ಲಿ ನೂತನ ಮಸೀದಿಯ ನಿರ್ಮಾಣ ಕಾರ್ಯ 2026ರಲ್ಲಿ ಆರಂಭಗೊಳ್ಳಲಿದೆ, ಎಂದು ಯೋಜನೆಯ ಹೊಣೆ ಹೊತ್ತಿರುವ ಇಂಡೊ-ಇಸ್ಲಾಮಿಕ್ ಸಾಂಸ್ಕೃತಿಕ ಪ್ರತಿಷ್ಠಾನ ಶನಿವಾರ ತಿಳಿಸಿದೆ.

ಈ ಬಗ್ಗೆ ಟ್ರಸ್ಟ್‌ ನ ಚೇರ್‌ಮನ್ ಝಫರ್ ಫರೂಖಿ ಅವರು ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡುತ್ತಾ, '' ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಮಸೀದಿಯ ಪರಿಷ್ಕೃತ ವಿನ್ಯಾಸ ಯೋಜನೆಗೆ ಅನುಮೋದನೆಯನ್ನು ಡಿಸೆಂಬರ್ ತಿಂಗಳ ಅಂತ್ಯದೊಳಗೆ ಸಲ್ಲಿಸುವ ಆಶಾವಾದವನ್ನು ಹೊಂದಿದ್ದೇವೆ. 2026ರ ಏಪ್ರಿಲ್‌ ನಲ್ಲಿ ಮಸೀದಿ ನಿರ್ಮಾಣ ಯೋಜನೆಯು ಎಪ್ರಿಲ್ 2026ರಂದು ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ.

ಟ್ರಸ್ಟ್ ಸಲ್ಲಿಸಿದ್ದ ಮಸೀದಿಯ ಮೊದಲ ವಿನ್ಯಾಸವನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ತಿರಸ್ಕರಿಸಿತ್ತು. ಇದಕ್ಕೂ ಮುನ್ನ ಮಸೀದಿಯ ಅತ್ಯಾಧುನಿಕ ವಿನ್ಯಾಸದ ಬಗ್ಗೆ ಸಮುದಾಯದಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಐಐಎಸ್‌ಎಫ್ ಅದನ್ನು ಕೈಬಿಟ್ಟಿತ್ತು. ಇದೀಗ ಸಾಂಪ್ರಾದಾಯಿಕ ವಿನ್ಯಾಸದ ಮಸೀದಿಯ ನಕ್ಷೆಯು ಸದ್ಯದಲ್ಲೇ ಸಿದ್ಧವಾಗಲಿದೆ ಎಂದವರು ಹೇಳಿದ್ದಾರೆ.

ಈಗಾಗಲೇ ತುಂಬಾ ವಿಳಂಬವಾಗಿರುವ ಮಸೀದಿಯ ನಿರ್ಮಾಣ ಯೋಜನೆಗೆ ಎಡಿಎ ಅನುಮೋದನೆ ಮಹತ್ವದ್ದಾಗಿದೆ. ಆರೆ ಧನ್ನಿಪುರ ಸುತ್ತಮುತ್ತ ನಿವೇಶನದ ಕೊರತೆ ಸೇರಿದಂತೆ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳ ಬಗ್ಗೆ ಐಐಸಿಎಫ್ ಪರಿಶೀಲನೆ ನಡೆಸುತ್ತಿದೆ ಎಂದು ಫರೂಕಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries