ಇದರಿಂದಾಗಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ 134 ವಿಮಾನಗಳು ರದ್ದುಗೊಂಡಿದ್ದರೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ 127 ವಿಮಾನಗಳು ರದ್ದುಗೊಂಡಿವೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ 71 ವಿಮಾನಗಳು ರದ್ದುಗೊಂಡಿವೆ ಎಂದು ಇಂಡಿಗೊ ವಿಮಾನ ಯಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೇಶದ ಅತಿ ದೊಡ್ಡ ವೈಮಾನಿಕ ಸಂಸ್ಥೆಯಾದ ಇಂಡಿಗೊ ತನ್ನ ಕಾರ್ಯಾಚರಣೆ ಸಮಸ್ಯೆಗಳಿಂದಾಗಿ ಕಳೆದ ಮಂಗಳವಾರದಿಂದ ಭಾರಿ ಪ್ರಮಾಣದ ವಿಮಾನ ಸೇವೆ ರದ್ದತಿ ಹಾಗೂ ಮರು ವೇಳಾಪಟ್ಟಿ ನಿಗದಿಯ ಸಂಕಷ್ಟಕ್ಕೆ ಸಿಲುಕಿದೆ. ಡಿಸೆಂಬರ್ 10ರ ವೇಳೆಗೆ ತನ್ನ ವೈಮಾನಿಕ ಸೇವೆ ಸ್ಥಿರಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.




