ಪತ್ತನಂತಿಟ್ಟ: ಶಬರಿಮಲೆಯಲ್ಲಿ ಪಿಕ್‍ಪಾಕೆಟ್ ತಂಡಗಳು ವ್ಯಾಪಕವಾಗಿವೆ. ಕಳ್ಳರನ್ನು ಹಿಡಿಯಲು ಪೆÇಲೀಸ್ ವಿಶೇಷ ತಂಡ ನಡೆಸಿದ ಶೋಧದಲ್ಲಿ 40 ಪ್ರಕರಣಗಳು ದಾಖಲಾಗಿವೆ.
ಪ್ರತಿದಿನ ಸುಮಾರು ಒಂದು ಲಕ್ಷ ಯಾತ್ರಿಕರು ಭೇಟಿ ನೀಡುವ ಶಬರಿಮಲೆಯಲ್ಲಿ ಕಳ್ಳರನ್ನು ಹಿಡಿಯಲು ಪೆÇಲೀಸರು ಸಂಘಟಿತ ಪ್ರಯತ್ನ ಮಾಡುತ್ತಿದ್ದಾರೆ.
ಸೀಸನ್ ಆರಂಭದಿಂದಲೂ ಇಲ್ಲಿಯವರೆಗೆ 40 ಪ್ರಕರಣಗಳು ವರದಿಯಾಗಿವೆ.
ಪ್ರಕರಣಗಳಲ್ಲಿ ಕಳ್ಳತನ, ಹೊಡೆತ ಮತ್ತು ಟ್ಯಾಕ್ಸಿ ಚಾಲಕರ ನಡುವಿನ ಸಮಸ್ಯೆಗಳು ಸೇರಿವೆ.
ಪಂಪಾ ಮತ್ತು ಸನ್ನಿಧಾನಂನಲ್ಲಿ ವರದಿಯಾಗುತ್ತಿರುವ ಪಿಕ್‍ಪಾಕೆಟ್ ಪ್ರಕರಣಗಳ ಹೆಚ್ಚಳವನ್ನು ಪರಿಗಣಿಸಿ, ಆರೋಪಿಗಳನ್ನು ಬಂಧಿಸಲು ವಿವಿಧ ಸ್ಥಳಗಳಲ್ಲಿ ವಿಶೇಷ ಪೆÇಲೀಸ್ ತಂಡವನ್ನು ನಿಯೋಜಿಸಲಾಗಿದೆ.
ಯಾತ್ರಿಕರು ತಮ್ಮ ಪರ್ಸ್, ಮೊಬೈಲ್ ಫೆÇೀನ್‍ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗರೂಕರಾಗಿರಬೇಕು.
ನೀಲಿಮಲೆ ಪ್ರದೇಶಗಳಲ್ಲಿ ಜೇಬುಗಳ್ಳತನ ಮತ್ತು ಕಳ್ಳತನ ಪ್ರಮುಖವಾಗಿ ವರದಿಯಾಗುತ್ತವೆ.ಈ ಪ್ರದೇಶಗಳಲ್ಲಿ ವಿಶೇಷ ತಂಡವು ಹೆಚ್ಚಿನ ತಪಾಸಣೆ ನಡೆಸಲಿದೆ.
ಅಪ್ಪಾಚಿಮೇಡು ಸೇರಿದಂತೆ ಪ್ರದೇಶಗಳಲ್ಲಿ ಕಣ್ಗಾವಲು ತೀವ್ರಗೊಳಿಸಲಾಗಿದೆ. ಅಲ್ಲಿ ಹೆಚ್ಚಿನ ತಪಾಸಣೆ ನಡೆಸಲಾಗುವುದು ಎಂದು ಪಂಪಾ ಪೆÇಲೀಸ್ ಠಾಣಾಧಿಕಾರಿ ಸಿ.ಕೆ. ಮನೋಜ್ ತಿಳಿಸಿದ್ದಾರೆ.




