ಬದಿಯಡ್ಕ: ನೀರ್ಚಾಲು ಶ್ರೀಕುಮಾರಸ್ವಾಮಿ ಭಜನಾ ಮಮದಿರದ 51ನೇ ವಾರ್ಷಿಕೋತ್ಸವ ಇಂದು(ಗುರುವಾರ) ವಿವಿಧ ಕಾರ್ಯಕ್ರಮಗಳೊಮದಿಗೆ ನಡೆಯಲಿದೆ.
ಬೆಳಿಗ್ಗೆ 6.30ಕ್ಕೆ ಗಣಪತಿ ಹವನ, ಧ್ವಜಾರೋಹಣ, 9.30 ರಿಂದ 12.30ರ ವರೆಗೆ ವಿವಿಧ ತಂಡಗಳಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಅಪರಾಹ್ನ 2 ರಿಂದ 6ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನೆ, ಬಳಿಕ ದೀಪ ಪ್ರತಿಷ್ಠೆ, ಬಳಿಕ ಭಜನೆ, ರಾತ್ರಿ 9ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.

