ಹೈದರಾಬಾದ್ (PTI): 54 ಜನರ ಸಾವಿಗೆ ಕಾರಣವಾದ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಔಷಧ ಕಾರ್ಖಾನೆ ಸ್ಫೋಟ ಪ್ರಕರಣ ಸಂಬಂಧ ಸಿಗಾಚಿ ಇಂಡಸ್ಟ್ರೀಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು (ಸಿಇಒ) ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಜೂನ್ 30ರಂದು ನಡೆದಿದ್ದ ಅವಘಡ ಸಂಬಂಧ ಔಷಧ ಕಾರ್ಖಾನೆಯ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ರಾಜ್ ಸಿನ್ಹಾ ಎರಡನೇ ಆರೋಪಿಯಾಗಿದ್ದರು. ಶನಿವಾರ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

