ಮಂಜೇಶ್ವರ: ವರ್ಕಾಡಿ ಆರಿಬೈಲು ನಾಗಬ್ರಹ್ಮ ದೇವಸ್ಥಾನದ ಇತಿಹಾಸ ಪ್ರಸಿದ್ಧ ಆರಿಬೈಲು ಕಂಬಳ ಡಿಸೆಂಬರ್ 5 ರಂದು ಜರುಗಲಿದೆ. ಪ್ರತಿ ವರ್ಷ ಅರಿಬೈಲು ದೇವರ ಕಂಬಳ ನಡೆದುಬರುತ್ತಿದೆ. ಅಂದು ಮಧ್ಯಾಹ್ನ 12ಕ್ಕೆ ದೇವರ ಪೂಜೆ ಬಳಿಕ ಮಧ್ಯಾಹ್ನ 1 ಗಂಟೆಗೆ ಉಪವಾಸ ಕೋಣಗಳು ಮತ್ತು ಓಟದ ಕೋಣಗಳು ಕಂಬಳ ಗದ್ದೆಗೆ ಇಳಿಯಲಿದ್ದು, ನಂತರ ಕಂಬಳ ಜರಗಲಿರುವುದು. ಅಂದು ಸಂಜೆ ಕಂಬಳಕ್ಕೆ ಪೂಕರೆ ಅಳವಡಿಸಲಾಗುವುದು. ರಾತ್ರಿ ನಾಗ ಬ್ರಹ್ಮ ದೇವರ ಪೂಜೆ, ಉತ್ಸವ ಜರುಗಲಿರುವುದು.




