ಆಲಪ್ಪುಳ (PTI): ಸ್ಥಳೀಯ ಸಿಪಿಎಂ ನಾಯಕರೊಬ್ಬರ ಮೇಲೆ ಹಲ್ಲೆ ನಡೆಸಿದ ಅರೋಪದ ಮೇಲೆ ಬಿಜೆಪಿಯ ಆರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ.
ಭಾನುವಾರ ರಾತ್ರಿ 9.15ಕ್ಕೆ ಸ್ಥಳೀಯ ಸಿಪಿಎಂ ನಾಯಕ ರಂಜಿತ್ ಮತ್ತು ಅವರ ಸ್ನೇಹಿತ ರೆನಿತ್ ನೀಲಂಪೆರೂರ್ ಪಂಚಾಯತ್ ಪ್ರದೇಶದ ಬಳಿ ತೆರಳಿದ್ದರು.
ಇದನ್ನು ಆಕ್ಷೇಪಿಸಿ ಬಿಜೆಪಿ ಕಾರ್ಯಕರ್ತರು ಇಬ್ಬರನ್ನು ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತಿಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಲ್ಲಿ ಬಿಜೆಪಿ ಗೆದ್ದಿತ್ತು. ಗಾಯಗೊಂಡಿರುವ ರಂಜಿತ್ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

