ತಿರುವನಂತಪುರಂ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿರುವ ಏಳು ಜಿಲ್ಲೆಗಳಲ್ಲಿ ಭಾರೀ ಮತದಾನದೊಂದಿಗೆ ಬಹುತೇಕ ಶಾಮನತಿಯುತವಾಗಿ ಕೊನೆಗೊಂಡಿದೆ.
ಕೊನೆಯ ಮಾಹಿತಿ ಬಂದಾಗ, ಮತದಾನದ ಶೇಕಡಾವಾರು 70 ದಾಟಿತ್ತು. ಮತದಾನದ ಸಮಯ ಕಳೆದಿದ್ದರೂ, 6 ಗಂಟೆಯ ಮೊದಲು ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಯಿತು. ಕೊನೆಯದಾಗಿ ಸ್ವೀಕರಿಸಿದ ಮಾಹಿತಿಯ ಪ್ರಕಾರ, ಅತಿ ಹೆಚ್ಚು ಮತದಾನ ಎರ್ನಾಕುಳಂನಲ್ಲಿ ದಾಖಲಾಗಿದೆ. ಶೇ. 73.16.ರಷ್ಟು ಮತ ಚಲಾವಣೆಯಾಗಿದೆ. ತಿರುವನಂತಪುರದಲ್ಲಿ ಅತಿ ಕಡಿಮೆ. ಶೇ. 65.74.ಮತದಾನವಾಗಿದೆ. ಸಣ್ಣಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ, ಮತದಾನ ಸಾಮಾನ್ಯವಾಗಿ ಶಾಂತಿಯುತವಾಗಿತ್ತು.ಆಲಪ್ಪುಳ, ಮಣ್ಣಂಚೇರಿ, ಸರ್ಕಾರಿ ಪ್ರೌಢಶಾಲೆಯ ಬೂತ್ ಸಂಖ್ಯೆ 1 ರಲ್ಲಿ ಮತಗಟ್ಟೆಯಲ್ಲಿ ಅಭ್ಯರ್ಥಿಯ ಹೆಸರು ಪ್ರದರ್ಶಿಸದ ಕಾರಣ ಮತದಾನವನ್ನು ನಿಲ್ಲಿಸಲಾಯಿತು. ಬಿಎಸ್ಪಿಯ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಶೈಲಜಾ ಅವರ ಹೆಸರನ್ನು ಪ್ರದರ್ಶಿಸಲಾಗಿಲ್ಲ. ಬಿಎಸ್ಪಿ ಮರು ಮತದಾನಕ್ಕೆ ಒತ್ತಾಯಿಸಿದೆ.
ತಿರುವನಂತಪುರಂನಲ್ಲಿ ಮತ ಚಲಾಯಿಸುವಾಗ ಗೃಹಿಣಿ ಕುಸಿದು ಬಿದ್ದ ಘಟನೆ ತಿರುವಳ್ಳಂ ವಾರ್ಡ್‌ನ ಪಚಲ್ಲೂರ್ ಶಾಲೆಯ ಬೂತ್ ಸಂಖ್ಯೆ 6 ರಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ. ಮತದಾರೆ ಶಾಂತ (73) ಸಾಲಿನಲ್ಲಿ ನಿಂತಿದ್ದಾಗ ಸಾವನ್ನಪ್ಪಿದ್ದಾರೆ.
ತಿರುವನಂತಪುರಂನಿಂದ ಎರ್ನಾಕುಳಂವರೆಗಿನ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯಿತು. ಗುಡ್ಡಗಾಡು ಪ್ರದೇಶಗಳು ಸೇರಿದಂತೆ, ಭಾರೀ ಮತದಾನ ದಾಖಲಾಗಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪುಳ, ಕೊಟ್ಟಾಯಂ, ಇಡುಕ್ಕಿ ಮತ್ತು ಎರ್ನಾಕುಳಂ ಜಿಲ್ಲೆಗಳ 595 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮತದಾನ ನಡೆದಿದೆ.
ಜೊತೆಗೆ, ಮೂರು ಕಾರ್ಪೋರೇಷನ್, 39 ನಗರರಸಭೆಗಳು, ಏಳು ಜಿಲ್ಲಾ ಪಂಚಾಯತ್‌ಗಳು, 75 ಬ್ಲಾಕ್ ಪಂಚಾಯತ್‌ಗಳು ಮತ್ತು 471 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯಿತು. 11168 ವಾರ್ಡ್‌ಗಳಿಗೆ ಚುನಾವಣೆ ನಡೆದಿದೆ.

