ಮಲಪ್ಪುರಂ: ಗುರುವಾರ ನಡೆಯಲಿರುವ ಎರಡನೇ ಹಂತದ ಸ್ಥಳೀಯಾಡಳಿತ ಚುನಾವಣಾ ಕಣದಲ್ಲಿದ್ದ ಯುಡಿಎಫ್ ಅಭ್ಯರ್ಥಿ ನಿಧನರಾದ ಘಟನೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮಲಪ್ಪುರಂ ಜಿಲ್ಲೆಯ ಮೂತೇಡಂ ಪಂಚಾಯತ್‍ನ ವಾರ್ಡ್ 7 ರ ಚುನಾವಣೆಯನ್ನು ಮುಂದೂಡಲಾಗಿದೆ. ಯುಡಿಎಫ್ ಅಭ್ಯರ್ಥಿ ವೆಟ್ಟಂ ಹಸೀನಾ (52) ಅವರ ನಿಧನದ ನಂತರ ಚುನಾವಣೆಯನ್ನು ಮುಂದೂಡಲಾಗಿದೆ.
ಭಾನುವಾರ ಪ್ರಚಾರ ಮುಗಿಸಿ ಮನೆಗೆ ಹಿಂದಿರುಗಿದ ನಂತರ ಹಸೀನಾ ಕುಸಿದು ಬಿದ್ದರು. ಅವರನ್ನು ತಕ್ಷಣ ಎಡಪ್ಪಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಜೀವವನ್ನು ಉಳಿಸಲಾಗಲಿಲ್ಲ. ಸಾವಿಗೆ ಆರಂಭಿಕ ಕಾರಣ ಹೃದಯಾಘಾತ ಎಂದು ತಿಳಿದುಬಂದಿದೆ. ಕಿಂಡರ್‍ಗಾರ್ಟನ್ ಶಿಕ್ಷಕಿ ಹಸೀನಾ, ಮುಸ್ಲಿಂ ಲೀಗ್‍ನ ಸಕ್ರಿಯ ಕಾರ್ಯಕರ್ತೆಯಾಗಿದ್ದರು.

