ಆಯೋಗದ ಪರಿಶೀಲನಾ ವಿಷಯಗಳ ಬಗ್ಗೆ ನವೆಂಬರ್ 3ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.
ಕೇಂದ್ರ ಸರಕಾರದ ಸುಮಾರು 50.14 ಲಕ್ಷ ಉದ್ಯೋಗಿಗಳು ಮತ್ತು ಸುಮಾರು 69 ಲಕ್ಷ ಪಿಂಚಣಿದಾರರಿಗೆ ಎಂಟನೇ ವೇತನ ಆಯೋಗವು ಅನ್ವಯಿಸುತ್ತದೆ.
ಎಂಟನೇ ವೇತನ ಆಯೋಗವು ಯಾವಾಗ ಜಾರಿಗೊಳ್ಳುತ್ತದೆ ಎನ್ನುವುದನ್ನು ಸರಕಾರ ಇನ್ನಷ್ಟೇ ನಿರ್ಧರಿಸಬೇಕಾಗಿದೆ ಎಂದು ಸಚಿವರು ಹೇಳಿದರು. ಆದರೆ, ಆಯೋಗವು ತನ್ನ ಶಿಫಾರಸುಗಳನ್ನು ರಚನೆಯಾದ ದಿನದಿಂದ 18 ತಿಂಗಳುಗಳ ಒಳಗೆ ಸರಕಾರಕ್ಕೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ವರದಿಯ ಶಿಫಾರಸುಗಳು ಯಾವಾಗ ಜಾರಿಗೆ ಬಂದರೂ, ಅದು 2026 ಜನವರಿಯಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಹಾಗಾಗಿ, ಎಂಟನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದಾಗ ಉದ್ಯೋಗಿಗಳಿಗೆ ಹಿಂದಿನ ಬಾಕಿಯನ್ನು ನೀಡಲಾಗುತ್ತದೆ.

