HEALTH TIPS

ಅತೀ ವೇಗದ ಓಟ..: ಸಾರ್ವಕಾಲಿಕ ಕಂಬಳ ದಾಖಲೆ ಮುರಿದ 80 ಬಡಗಬೆಟ್ಟು ಕೋಣಗಳು

ಮಂಗಳೂರು: ಕಳೆದ ನಾಲ್ಕು ವರ್ಷಗಳಿಂದಿದ್ದ ಕಂಬಳದ ಅತಿ ವೇಗದ ಓಟದ ದಾಖಲೆ ಈಗ ಪತನವಾಗಿದೆ. ಮಂಗಳೂರು ರಾಮ ಲಕ್ಷ್ಮಣ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಶ್ರೀಕ ಸಂದೀಪ್‌ ಶೆಟ್ಟಿ ಅವರ ಕೋಣಗಳು ಈ ದಾಖಲೆ ಮುರಿದು ಹೊಸ ಕಂಬಳ ದಾಖಲೆ ಬರೆದಿದೆ.

ಈ ಬಾರಿಯ ಮಂಗಳೂರು ಕಂಬಳದ ಕೊನೆಯ ಸ್ಪರ್ಧೆಯಲ್ಲಿ ಬಡಗಬೆಟ್ಟಿನ ಕಂಬಳಗಳು ಚಿಗರೆಯಂತೆ ಓಡಿದವು. ಕ್ಷಣ ಮಾತ್ರದಲ್ಲಿ ಗುರಿ ತಲುಪಿದ ಕೋಣಗಳು 125 ಮೀಟರ್‌ ಕರೆಯನ್ನು ಕೇವಲ 10.87 ಸೆಕೆಂಡ್‌ ಗಳಲ್ಲಿ ತಲುಪಿ ನೂತನ ದಾಖಲೆ ಬರೆದವು. ಅಂದರೆ 100 ಮೀಟರ್‌ ಓಟವನ್ನು 8.69 ಸೆಕೆಂಡ್‌ ಗಳಲ್ಲಿ ಓಡಿದವು.

80 ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್‌ ಶೆಟ್ಟಿ ಅವರ ಯಜಮಾನಿಕೆಯಲ್ಲಿ ಗಾಂಧಿ ಮೈದಾನ ಸಂತು ಮತ್ತು ಸುರತ್ಕಲ್‌ ಪಾಂಚ ಎಂಬ ಎರಡು ಕೋಣಗಳು ಈ ದಾಖಲೆ ಮಾಡಿದೆ. ಮಾಸ್ತಿಕಟ್ಟೆ ಸ್ವರೂಪ್‌ ಅವರು ಈ ಕೋಣಗಳನ್ನು ಓಡಿಸಿ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಇದೇ ಕಂಬಳದ ಸೆಮಿ ಫೈನಲ್‌ ರೇಸ್‌ ನಲ್ಲಿ ಇದೇ ಸಂತು ಮತ್ತು ಪಾಂಚ ಕೋಣಗಳು 125 ಮೀಟರನ್ನು 11.06 ಸೆಕೆಂಡ್‌ ನಲ್ಲಿ ಕ್ರಮಿಸಿ ಈ ಸೀಸನ್‌ ನ ಅತಿ ವೇಗದ ಓಟ ಎಂಬ ದಾಖಲೆ ಬರೆದಿದ್ದವು. ಆದರೆ ಅದರ ಮುಂದಿನ ಓಟದಲ್ಲೇ ಎಲ್ಲಾ ದಾಖಲೆಗಳನ್ನು ಮೀರಿ ಹೊಸ ಕಂಬಳ ಸಾಧನೆ ಮಾಡಿದರು.

ನಾಲ್ಕು ವರ್ಷದ ಹಿಂದಿನ ದಾಖಲೆ

ಈ ಹಿಂದೆ 2021ರ ಕಕ್ಯಪದವು ಕಂಬಳದಲ್ಲಿ ಈ ಹಿಂದಿನ ದಾಖಲೆ ನಿರ್ಮಾಣವಾಗಿತ್ತು. ಆಗ ಮಿಜಾರು ಪ್ರಸಾದ್‌ ನಿಲಯ ಶಕ್ತಿ ಪ್ರಸಾದ್‌ ಅವರ ಕೋಣಗಳು 125 ಮೀಟರ್‌ ಓಟವನ್ನು 10.95 ಸೆಕೆಂಡ್‌ ಗಳಲ್ಲಿ (100 ಮೀಟರ್‌ ಗೆ 8.76 ಸೆ) ಕ್ರಮಿಸಿ ದಾಖಲೆ ಬರೆದಿದ್ದವು. ಮಾಳ ಪುಟ್ಟ ಮತ್ತು ಮಿಜಾರ್‌ ಅಪ್ಪು ಕೋಣಗಳನ್ನು ಅಂದು ಓಡಿಸಿದ್ದ ಮಿಜಾರು ಶ್ರೀನಿವಾಸ ಗೌಡ ಅವರು ದಾಖಲೆ ಬರೆದಿದ್ದರು. ಈ ದಾಖಲೆ ಇಂದು ಪತನವಾಗಿದೆ.

ಮಂಗಳೂರು ರಾಮ - ಲಕ್ಷ್ಮಣ ಜೋಡುಕರೆ ಕಂಬಳ ಕೂಟದ ಫಲಿತಾಂಶ

ಮಂಗಳೂರು ಕಂಬಳ ಕೂಟದಲ್ಲಿ ಒಟ್ಟು 141 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ 09 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 10 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 17 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 26 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 19 ಜೊತೆ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ 60 ಜೊತೆ ಕೋಣಗಳು ಸ್ಪರ್ಧೆ ಮಾಡಿದ್ದವು.

ಅಡ್ಡ ಹಲಗೆ

ಪ್ರಥಮ: ಇರುವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ "ಎ" (11.68)

ಹಲಗೆ ಮೆಟ್ಟಿದವರು:ತೆಕ್ಕಟ್ಟೆ ಸುಧೀರ್ ದೇವಾಡಿಗ

ದ್ವಿತೀಯ: ನಾರ್ಯಗುತ್ತು ಕುವೆತ್ತಬೈಲು ಸಂತೋಷ್ ರೈ ಬೊಳಿಯಾರು (11.83)

ಹಲಗೆ ಮೆಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ಹಗ್ಗ ಹಿರಿಯ

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (11.41)

ಓಡಿಸಿದವರು: ಕಕ್ಯಪದವು ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ಪ್ರಾಣೇಶ್ ದಿನೇಶ್ ಭಂಡಾರಿ "ಎ" (11.50)

ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ಹಗ್ಗ ಕಿರಿಯ

ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ "ಬಿ" (11.41)

ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ

ದ್ವಿತೀಯ: ಎರ್ಮಾಳ್ ಡಾ.ಚಿಂತನ್ ರೋಹಿತ್ ಹೆಗ್ಡೆ (11.62)

ಓಡಿಸಿದವರು: ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡ

ನೇಗಿಲು ಹಿರಿಯ

ಪ್ರಥಮ: ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (10.87 ದಾಖಲೆಯ ಓಟ)

ಓಡಿಸಿದವರು: ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್

ದ್ವಿತೀಯ: ಮಂಗಳೂರು ಮರಕಡ ಬಾಯಾಡಿ ಮನೆ ಶಾಂತ ಸಂಜಯ್ ಶೆಟ್ಟಿ "ಎ" (11.44)

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ನೇಗಿಲು ಕಿರಿಯ

ಪ್ರಥಮ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ "ಬಿ" (11.56)

ಓಡಿಸಿದವರು: ಕಾವೂರುದೋಟ ಸುದರ್ಶನ್

ದ್ವಿತೀಯ: ಮುಲ್ಕಿ ಚಿತ್ರಾಪು ಸಾನದಮನೆ ಅಂಬಿಕಾ ರವೀಂದ್ರ ಪೂಜಾರಿ (11.74)

ಓಡಿಸಿದವರು: ಬಾರಾಡಿ ನತೀಶ್ ಸಪಲಿಗ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries