ಪಟ್ನಾ: 'ಕಾರ್ಯಕರ್ತರ ಏಳ್ಗೆಗೆ ಅವಕಾಶವಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿ' ಎಂದು ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್ ನಬೀನ್ ಸೋಮವಾರ ಇಲ್ಲಿ ಹೇಳಿದರು.
'ನನಗೆ ದೊರೆತ ಉನ್ನತ ಹುದ್ದೆಯು ಪಕ್ಷದ ಆಶೀರ್ವಾದ' ಎಂದು ಇದೇ ಸಂದರ್ಭ ತಿಳಿಸಿದರು.
'ಬಿಜೆಪಿಯು ಯುವಕರಿಗೆ ಪ್ರೋತ್ಸಾಹ ನೀಡುವ ಜೊತೆಗೆ ದೊಡ್ಡ ಗುರಿ ಸಾಧನೆಗೆ ಸೂಕ್ತ ಮಾರ್ಗದರ್ಶನ ನೀಡಲಿದೆ.
ತನ್ನ ಕಟ್ಟಕಡೆಯ ಕಾರ್ಯಕರ್ತನಿಗೂ ಸೂಕ್ತ ಅವಕಾಶ ಕೊಡಲಿದೆ' ಎಂದು ಹೇಳಿದರು.
'ಸಂಘಟನೆಯನ್ನು ಬಲಪಡಿಸಲಿಕ್ಕಾಗಿ ಪಕ್ಷದ ಕಾರ್ಯಕರ್ತರು ತಾಳ್ಮೆಯಿಂದ ಕೆಲಸ ಮಾಡಬೇಕು' ಎಂದರು.

