HEALTH TIPS

ಭಾರತ-ರಷ್ಯಾ ಸಂಬಂಧ ವಿಶ್ವದಲ್ಲೇ ಸದೃಢ: ಜೈಶಂಕರ್‌

ನವದೆಹಲಿ: ಕಳೆದ 70-80 ವರ್ಷಗಳಿಂದಲೂ ಭಾರತ ಮತ್ತು ರಷ್ಯಾ ನಡುವಿನ ಪಾಲುದಾರಿಕೆಯು ಜಗತ್ತಿನ 'ಅತ್ಯಂತ ಸದೃಢವಾದ ಸಂಬಂಧ'ಗಳಲ್ಲಿ ಒಂದಾಗಿದೆ. ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಅವರ ಭಾರತ ಭೇಟಿಯು 'ಆರ್ಥಿಕ ಒಪ್ಪಂದಗಳಿಗೆ ಮರುಜೀವ ನೀಡುವ ಉದ್ದೇಶ ಹೊಂದಿತ್ತು' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಶನಿವಾರ ಹೇಳಿದ್ದಾರೆ.

ಸಂವಾದವೊಂದರಲ್ಲಿ ಮಾತನಾಡಿದ ಸಚಿವರು, ಪುಟಿನ್‌ ಅವರ ಭಾರತ ಭೇಟಿಯು ಅಮೆರಿಕ-ಭಾರತದ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆಯನ್ನು ಜಟಿಲಗೊಳಿಸುತ್ತದೆ ಎಂಬ ವಾದಗಳನ್ನು ಅಲ್ಲಗಳೆದರು.

'ವಿಶ್ವದ ಎಲ್ಲ ಬೃಹತ್‌ ರಾಷ್ಟ್ರಗಳೊಂದಿಗೂ ಭಾರತ ಸಂಬಂಧ ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತು. ಇತರೆ ದೇಶಗಳೊಂದಿಗೆ ನಮ್ಮ ಸಂಬಂಧವನ್ನು ಹೀಗೆಯೇ ಇರಬೇಕು ಎಂದು ಬಯಸುವ 'ವಿಶೇಷ ಅಧಿಕಾರ' ಮತ್ತೊಂದು ದೇಶಕ್ಕೆ ಇರಬೇಕು ಎನ್ನುವುದು ಒಪ್ಪುವಂಥ ಸಂಗತಿಯಲ್ಲ' ಎಂದು ಅವರು ‌'ಹಿಂದೂಸ್ತಾನ್ ಟೈಮ್ಸ್‌ ನಾಯಕತ್ವ ಶೃಂಗ'ದಲ್ಲಿ ಹೇಳಿದರು.

'ನಾವು ಹಲವು ದೇಶಗಳೊಟ್ಟಿಗೆ ಸಂಬಂಧ ಹೊಂದಿದ್ದೇವೆ. ಈ ವಿಷಯದಲ್ಲಿ ನಮಗೆ ಆಯ್ಕೆಯ ಸ್ವಾತಂತ್ರ್ಯವೂ ಇದೆ' ಎಂದರು.

'ವ್ಯಾಪಾರ ವಿಸ್ತರಣೆಯತ್ತ ಟ್ರಂಪ್‌ ಅವರ ಆಡಳಿತವೂ ಗಮನಹರಿಸಿದೆ. ಮಾತುಕತೆ ವೇಳೆ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳಲಿದೆ. ನಮ್ಮ ಕಾರ್ಮಿಕರು, ರೈತರು, ಸಣ್ಣ ಉದ್ಯಮಿಗಳು ಮತ್ತು ಮಧ್ಯಮವರ್ಗದವರ ಹಿತಾಸಕ್ತಿ ರಕ್ಷಣಯೇ ನಮಗೆ ಮುಖ್ಯ' ಎಂದು ಅವರು ಹೇಳಿದರು.

'ಚೀನಾ, ಅಮೆರಿಕ ಅಥವಾ ಐರೋಪ್ಯ ರಾಷ್ಟ್ರಗಳ ಜೊತೆ ರಷ್ಯಾ ಹೊಂದಿರುವ ಸಂಬಂಧ ಹಲವು ಏರಿಳಿತಗಳನ್ನು ಹೊಂದಿದೆ. ಈ ದೇಶಗಳೊಂದಿಗಿನ ನಮ್ಮ ಸಂಬಂಧವೂ ಇದಕ್ಕೆ ಹೊರತಾಗಿಲ್ಲ' ಎಂದರು.

'ಭಾರತೀಯರು ರಷ್ಯಾದಲ್ಲಿ ಸುಲಭವಾಗಿ ಉದ್ಯೋಗ ಅವಕಾಶ ಹೊಂದುವುದು, ರಸಗೊಬ್ಬರ ಕುರಿತ ಜಂಟಿ ಸಹಭಾಗಿತ್ವ ಸೇರಿದಂತೆ ಹಲವು ಮಹತ್ವದ ಒಪ್ಪಂದ ಆಗಿವೆ. ಇದು ದೊಡ್ಡ ಬೆಳವಣಿಗೆ' ಎಂದು ಜೈಶಂಕರ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries