ಪೆರ್ಲ: ಪೆರ್ಲ ಪೇಟೆಯಲ್ಲಿ ಗುರುವಾರ ರಾತ್ರಿ ಬೃಹತ್ ಗಾತ್ರದ ಹಂದಿಯೊಂದು ರಸ್ತೆಯಲ್ಲಿ ಅಡ್ಡಾಡುವ ಮೂಲಕ ಸ್ಥಳಿಯನಿವಾಸಿಗಳಲ್ಲಿ ಭೀತಿಯನ್ನುಂಟುಮಾಡಿತು. ವಾಹನ ಹಾಗೂ ಜನಸಂಚಾರವಿದ್ದ ಪೇಟೆಯಲ್ಲಿ ಏಕಾಏಕಿ ಹಂದಿಯೊಂದು ಕಾಣಿಸಿಕೊಳ್ಳುತ್ತಿದ್ದಂತೆ ಜನತೆ ಭಯಭೀತರಾಗಿ ದೂರಕ್ಕೆ ಸರಿಯಲಾರಂಭಿಸಿದ್ದರು. ಆರಂಭದಲ್ಲಿ ಕಾಡು ಹಂದಿ ಎಂದು ಅಂಜಿಕೆಯಿಂದ ದೂರ ಸರಿಯಲಾರಂಭಿಸಿದ ಜನತೆ, ಸಾಕುಹಂದಿ ಎಂದು ಖಚಿತಗೊಳ್ಳುತ್ತಿದ್ದಂತೆ ಸನಿಹ ಬರಲಾರಂಭಿಸಿದ್ದರು.
ಅಲ್ಪ ಹೊತ್ತಿನಲ್ಲಿ ಹಂದಿಯನ್ನು ಅರಸಿಕೊಂಡು ಬಂದ ಇಬ್ಬರು ಅನಾಯಾಸವಾಗಿ ಸೆರೆಹಿಡಿದು ವಾಹನದಲ್ಲಿ ಕರೆದೊಯ್ಯುತ್ತಿದ್ದಂತೆ ಪೇಟೆಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಪಿಕ್‍ಅಪ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಹಂದಿ ವಾಹನದಿಂದ ಜಿಗಿದು ಹೊರಬಿದ್ದು ಪೇಟೆಯಲ್ಲಿ ಓಟಕಿತ್ತಿರಬೇಕೆಂದು ಸಂಶಯಿಸಲಾಗಿದೆ.


