ಉಪ್ಪಳ: ಮಾಜಿ ಲೋಕಸಭಾ ಸದಸ್ಯ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ. ಐ.ರಾಮ ರೈ ಅವರ ನೆನಪು ಸದಾ ಕಾಲ ಅಮರ ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅಭಿಪ್ರಾಯಪಟ್ಟರು.
ರಾಮ ರೈಗಳ ಪುಣ್ಯಸ್ಮರಣೆಯ ಅಂಗವಾಗಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆದ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸರಳ ಸಜ್ಜನಿಕೆಯ ರಾಮ ರೈಗಳ ಜೀವನಶೈಲಿ ಹೊಸ ಜನಾಂಗಕ್ಕೆ ಮಾದರಿ ಎಂದು ಅವರು ಹೇಳಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೋಹನ ರೈ ಕಯ್ಯಾರು, ನಾರಾಯಣ ಏದಾರು, ಕಾರ್ಯದರ್ಶಿಗಳಾದ ರಾಘವೇಂದ್ರ ಭಟ್, ಸಚ್ಚಿದಾನಂದ ರೈ, ಮಂಡಲ ಪದಾಧಿಕಾರಿಗಳಾದ ಶಾಜಿ ಎನ್.ಸಿ., ಶಿವರಾಮ ಶೆಟ್ಟಿ, ಗಂಗಾಧರ ನಾಯ್ಕ, ಎಡ್ವರ್ಡ್, ಜೋಯ್ ಕಯ್ಯಾರು, ಚನಿಯಪ್ಪ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು.




.jpg)
