ತಿರುವನಂತಪುರಂ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿದೆ. ತಿರುವನಂತಪುರಂನಿಂದ ಎರ್ನಾಕುಳಂವರೆಗಿನ ಏಳು ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.
ಇಂದು ಬೆಳಿಗ್ಗೆ 9 ಗಂಟೆಯಿಂದ ಮತಗಟ್ಟೆ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಸಮಸ್ಯೆ ಪೀಡಿತ ಬೂತ್‍ಗಳಲ್ಲಿ ವಿಶೇಷ ಪೋಲೀಸ್ ಭದ್ರತೆ ಒದಗಿಸಲಾಗಿದೆ. ಮತದಾನದ ಸಮಯ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಇರಲಿದೆ.
ಮೊದಲ ಹಂತದಲ್ಲಿ ತ್ರಿಸ್ಥರ ಪಂಚಾಯತಿಗಳು ಮತ್ತು ನಗರಸಭೆಗಳು ಸೇರಿದಂತೆ 595 ಸ್ಥಳೀಯಾಡಳಿತ ಸಂಸ್ಥೆಗಳ 11,168 ವಾರ್ಡ್‍ಗಳಲ್ಲಿ ಮತದಾನ ನಡೆಯಲಿದೆ.
36,630 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. 1.32 ಕೋಟಿಗೂ ಹೆಚ್ಚು ಮತದಾರರಿಗೆ 15,432 ಮತಗಟ್ಟೆಗಳಿವೆ. 480 ಸಮಸ್ಯೆ ಪೀಡಿತ ಬೂತ್‍ಗಳಿವೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಇಲ್ಲಿ ವಿಶೇಷ ಪೆÇಲೀಸ್ ಭದ್ರತೆ, ವೆಬ್‍ಕಾಸ್ಟಿಂಗ್ ಮತ್ತು ವಿಡಿಯೋಗ್ರಫಿ ಇರುತ್ತದೆ. ಡಿ.11 ರಂದು ನಡೆಯಲಿರುವ ಎರಡನೇ ಹಂತದ ಮತದಾನಕ್ಕಾಗಿ 1.80 ಲಕ್ಷ ಅಧಿಕಾರಿಗಳು ಮತ್ತು 70,000 ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

