ಕಣ್ಣೂರು: ಸ್ಥಳೀಯಾಡಳಿತ ಚುನಾವಣೆಗೆ ಒಂದು ದಿನ ಬಾಕಿಯಿದ್ದಾಗ ಐಕ್ಯರಂಗದ ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿರುವ ಯುವತಿ, ಬಿಜೆಪಿ ಕಾರ್ಯಕರ್ತನ ಜತೆ ಪರಾರಿಯಾಗಿದ್ದು, ನಂತರ ಜೋಡಿ ಠಾಣೆಗೆ ಹಾಜರಾಗಿದ್ದು, ಪೊಲೀಸರು ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಯುವತಿ ಪ್ರಿಯತಮನ ಜತೆ ತೆರಳುವ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ತಮ್ಮಿಚ್ಛೆಯಂತೆ ನಡೆದುಕೊಳ್ಳಲು ನೀಡಿದ ಆದೇಶದನ್ವಯ ಇಬ್ಬರೂ ಜತೆಯಗಿ ತೆರಳಿದ್ದಾರೆ.
ಕಣ್ಣೂರು ಜಿಲ್ಲೆಯ ಚೋಕ್ಲಿ ಗ್ರಾಮ ಪಂಚಾಯಿತಿಯಲ್ಲಿ ಘಟನೆ ನಡೆದಿದೆ. ಕಣ್ಣೂರಿನ ಚೋಕ್ಲಿ ಗ್ರಾ. ಪಂ. ನ 9ನೇ ವಾರ್ಡಿನ ಮುಸ್ಲಿಂಲೀಗ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿ. ಪಿ. ಅರುವಾ(29)ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಚುನಾವಣಾ ಕಣದಲ್ಲಿ ಸಕ್ರಿಯವಾಗಿ ಗೃಹ ಸಂಪರ್ಕ ನಡೆಸಿ ಮತದಾರರನ್ನು ಖುದ್ದು ಭೇಟಿಯಾಗುತ್ತಿದ್ದ ಇವರು ಪ್ರಬಲ ಸ್ಪರ್ಧೆ ಒಡ್ಡಿದ್ದರು. ಈ ಮಧ್ಯೆ ಅಬ್ಯರ್ಥಿಯ ನಾಪತ್ತೆ ಪ್ರಕರಣ ವ್ಯಾಪಕ ಚರ್ಚೆಗೆ ಕರಣವಾಗಿತ್ತು. ಈಕೆಯನ್ನು ಸಿಪಿಎಂ ಪಕ್ಷದವರು ಅಪಹರಿಸಿ ದಿಗ್ಬಂಧನದಲ್ಲಿಟ್ಟಿದ್ದಾರೆಂದು ಆರೋಪಿಸಿ ಐಕ್ಯರಂಗ ಪ್ರತಿಭಟನೆಯನ್ನೂ ನಡೆಸಿತ್ತು. ಈ ಬಗ್ಗೆ ಯುವತಿಯ ತಾಯಿ ಪೆÇೀಲೀಸರಿಗೆ ದೂರು ನೀಡಿದ್ದರು. ಆದರೆ ಘಟನೆಯಲ್ಲಿ ತಮಗೆ ಯಾವುದೇ ನಂಟಿಲ್ಲವೆಂದು ಸಿಪಿಐಎಂ ಸ್ಪಷ್ಟನೆ ನೀಡಿತ್ತು.
ಈ ಮಧ್ಯೆ ಪೆÇಲೀಸರು ತನಿಖೆ ನಡೆಸಿದಾಗ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ಆಕೆ ಸಕ್ರಿಯ ಬಿಜೆಪಿ ಕಾರ್ಯಕರ್ತನಾದ ತನ್ನ ಸ್ನೇಹಿತನ ಜತೆ ತೆರಳಿರುವುದಾಗಿ ತಿಳಿದುಬಂದಿತ್ತು.

