HEALTH TIPS

ಇಸ್ರೇಲ್-ಹಮಾಸ್‌ ಕದನ ವಿರಾಮ: ಮೊದಲ ಹಂತ ಬಹುತೇಕ ಪೂರ್ಣ

 ದೋಹಾ: ಇಸ್ರೇಲ್ ಮತ್ತು ಹಮಾಸ್‌ ನಡುವಿನ ಕದನ ವಿರಾಮದ ಮೊದಲ ಹಂತವು ಬಹುತೇಕ ಪೂರ್ಣಗೊಂಡಿದ್ದು, ಒಬ್ಬ ಒತ್ತೆಯಾಳು ಮಾತ್ರ ಗಾಜಾದಲ್ಲಿ‌ ಉಳಿದಿದ್ದಾರೆ.

ಮಧ್ಯಪ್ರಾಚ್ಯವನ್ನು ಪುನರ್‌ರೂಪಿಸಬಹುದಾದ ಸಂಕೀರ್ಣವಾದ ಎರಡನೇ ಹಂತದ ಕದನ ವಿರಾಮವನ್ನು ಇಸ್ರೇಲ್, ಪ್ಯಾಲೆಸ್ಟೀನ್‌ನ ಹಮಾಸ್‌ ಸಂಘಟನೆ, ಮಧ್ಯಸ್ಥಿಕೆ ವಹಿಸಿರುವ ಅಮೆರಿಕ ಮತ್ತು ಇತರ ಅಂತರರಾಷ್ಟ್ರೀಯ ಸಂಘಟನೆಗಳು ಎದುರು ನೋಡುತ್ತಿವೆ.


ಗಾಜಾದಲ್ಲಿ ಹಮಾಸ್‌ ಆಡಳಿತವನ್ನು ಕೊನೆಗೊಳಿಸುವ ಉದ್ದೇಶ ಹೊಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ 20 ಅಂಶಗಳ ಯೋಜನೆಯನ್ನು ವಿಶ್ಚಸಂಸ್ಥೆಯ ಭದ್ರತಾ ಮಂಡಳಿಯು ಅಂಗೀಕರಿಸಿದೆ. ಇದು ಯಶಸ್ವಿಯಾದರೆ ಅಂತರರಾಷ್ಟ್ರೀಯ ಮೇಲ್ವಿಚಾರಣೆಯಲ್ಲಿ ಮಿಲಿಟರಿ ಮುಕ್ತ ಗಾಜಾ ನಿರ್ಮಾಣವಾಗಲಿದೆ. ಇಸ್ರೇಲ್ ಮತ್ತು ಅರಬ್‌ ದೇಶಗಳ ನಡುವಿನ ಸಂಬಂಧ ತಿಳಿಗೊಂಡು, ಪ್ಯಾಲೆಸ್ಟೀನ್ ಸ್ವಾತಂತ್ರ್ಯಕ್ಕೆ ದಾರಿಯಾಗಲಿದೆ.

ಆದರೆ ಒಪ್ಪಂದ ಅರ್ಧದಲ್ಲಿ ಮುರಿದುಬಿದ್ದರೆ. ಗಾಜಾ ಮುಂದಿನ ವರ್ಷ ಸಂಕಷ್ಟಕ್ಕೆ ಸಿಲುಕಲಿದೆ. ಅಲ್ಲಿನ ಹಲವು ಪ್ರದೇಶಗಳು ‌ಹಮಾಸ್‌ ಹಿಡಿತದಲ್ಲೇ ಉಳಿಯಲಿವೆ. ಇಸ್ರೇಲ್ ಭೀಕರ ದಾಳಿಯನ್ನು ನಡೆಸುವ ಸಾಧ್ಯತೆಗಳಿರುತ್ತವೆ ಮತ್ತು ಗಾಜಾದ ನಿವಾಸಿಗಳು ನಿರಾಶ್ರಿತರಾಗಿ, ನಿರುದ್ಯೋಗಿಗಳಾಗಿ, ಬೇರೆ ದೇಶಕ್ಕೆ ವಲಸೆ ಹೋಗಲಾರದೆ ಅಂತರರಾಷ್ಟ್ರೀಯ ನೆರವಿನ ಮೇಲೆಯೇ ‌ಅವಲಂಬಿತರಾಗಬೇಕಾಗುತ್ತದೆ.

'ವಾರಾಂತ್ಯದಲ್ಲಿ ಕದನ ವಿರಾಮವು ನಿರ್ಣಾಯಕ ಹಂತದಲ್ಲಿತ್ತು. ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಈ ತಿಂಗಳಲ್ಲಿ ಅಮೆರಿಕದ ಶ್ವೇತಭವನಕ್ಕೆ ಭೇಟಿ ನೀಡಿ, ಮುಂದಿನ ಹೆಜ್ಜೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ' ಎಂದು ಪ್ರಮುಖ ಮಧ್ಯಸ್ಥಗಾರರಾದ, ಕತಾರ್‌ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲರಹಮಾನ್‌ ಅಲ್ ಥನಿ ಅವರು ತಿಳಿಸಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries