ಕಾನ್ಪುರ: ಅಕ್ರಮವಾಗಿ ಭಾರತ ಪ್ರವೇಶಿಸಿರುವ ಆರೋಪದಲ್ಲಿ ಮೂವರು ರೋಹಿಂಗ್ಯಾ ವಲಸಿಗರನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಕಾನ್ಪುರದ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಮೊಹಮ್ಮದ್ ಇಬ್ರಾಹಿಂ (26) ಮೊಹಮ್ಮದ್ ಹಶೀಂ (21) ಹಾಗೂ ಶೌಕ್ ತಾರಾ (17) ಎಂದು ಗುರುತಿಸಲಾಗಿದೆ.
ಬಾಂಗ್ಲಾದೇಶದ ರೋಹಿಂಗ್ಯ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿದ್ದ ಇವರು, ಅಕ್ರಮವಾಗಿ ಭಾರತ ಪ್ರವೇಶಿಸಿದ್ದಾರೆ ಎಂದು ಸರ್ಕಲ್ ಆಫೀಸರ್ ದುಷ್ಯಂತ್ ಕುಮಾರ್ ಸಿಂಗ್ ಗುರುವಾರ ಮಾಹಿತಿ ನೀಡಿದ್ದಾರೆ.

