HEALTH TIPS

ಪೆನ್-ಪೇಪರ್ ಪರೀಕ್ಷೆಗೆ ಮರಳಲು ಸಂಸದೀಯ ಸಮಿತಿ ಶಿಫಾರಸು

ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, NTA ನಡೆಸುವ ಆನ್‌ಲೈನ್ ಪರೀಕ್ಷೆಗಳನ್ನು ಮಿತಿಗೊಳಿಸಿ ಪೆನ್-ಪೇಪರ್ ವಿಧಾನಕ್ಕೆ ಆದ್ಯತೆ ನೀಡಬೇಕು ಎಂದು ದಿಗ್ವಿಜಯ್ ಸಿಂಗ್ ನೇತೃತ್ವದ ಶಿಕ್ಷಣದ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಸಮಿತಿಯ 371ನೇ ವರದಿಯನ್ನು ಉಲ್ಲೇಖಿಸಿ , NTA ಇತ್ತೀಚಿನ ಘಟನೆಗಳ ನಂತರ "ವಿಶ್ವಾಸ ಮೂಡಿಸುವಲ್ಲಿ ವಿಫಲವಾಗಿದೆ" ಎಂದು ಹೇಳಿದರು. NAAC ಮತ್ತು ICHR ಅಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಲು, ಯುಜಿಸಿ ಕರಡು ನಿಯಮಗಳನ್ನು ಮರುಪರಿಶೀಲನೆಗೆ ಕಳುಹಿಸಲು ಹಾಗೂ JRF ಮೊತ್ತ ಹೆಚ್ಚಿಸಲು ಸಮಿತಿ ಸಲಹೆ ನೀಡಿದೆ ಎಂದು ತಿಳಿಸಿದ್ದಾರೆ.

ಲಡಾಖ್‌ನ HIAL ಸಂಸ್ಥೆಗೆ UGC ಮಾನ್ಯತೆ ನೀಡುವಂತೆ ಶಿಫಾರಸು ಮಾಡಿರುವ ಸಮಿತಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪ ಪಿಂಚಣಿ ಯೋಜನೆ ಜಾರಿ, ICSSRಗೆ ಸಂಬಂಧಿಸಿದ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ ಮತ್ತು 7ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕೆ ಒತ್ತು ನೀಡಿದೆ ಎಂದು ರಮೇಶ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries