ಕಲ್ಪೆಟ್ಟ: ವಯನಾಡಿನ ತೋಲ್ಪೆಟ್ಟಿಯಲ್ಲಿ ಮತದಾರರನ್ನು ಸೆಳೆಯಲು ಸಿಪಿಎಂ ಮದ್ಯ ವಿತರಿಸಿರುವುದು ವರದಿಯಾಗಿದೆ. ನೆಡುಮ್ಥಾನ ವನವಾಸಿ ಕಾಲೋನಿಯಲ್ಲಿ ರಾತ್ರಿ ಸಿಪಿಎಂ ಕಾರ್ಯಕರ್ತರು ಮದ್ಯ ವಿತರಿಸಲು ಪ್ರಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಘಟನೆಯ ಬಗ್ಗೆ ತಿಳಿದ ನಂತರ ಸ್ಥಳಕ್ಕೆ ತಲುಪಿದ ಪೋಲೀಸರು, ಬಂಧಿಸಿದ್ದ ಮೂವರು ಸಿಪಿಎಂ ಕಾರ್ಯಕರ್ತರನ್ನು ಇತರ ಕಾರ್ಯಕರ್ತರು ಬಲವಂತವಾಗಿ ಬಿಡುಗಡೆ ಮಾಡಿ ಕರೆದೊಯ್ದರು.
ಇದು ಮತ್ತಷ್ಟು ಘರ್ಷಣೆಗೆ ಕಾರಣವಾಯಿತು. ನಂತರ, ಪೋಲೀಸರು ಮಧ್ಯಪ್ರವೇಶಿಸಿ ಸ್ಥಳದಲ್ಲಿ ಬೀಡುಬಿಟ್ಟಿದ್ದ ಎರಡೂ ಕಡೆಯ ಪಕ್ಷದ ಕಾರ್ಯಕರ್ತರನ್ನು ಹಿಮ್ಮೆಟ್ಟಿಸಿದರು. ಪ್ರಸ್ತುತ, ಪ್ರದೇಶದಲ್ಲಿ ಭಾರೀ ಪೆÇಲೀಸ್ ಭದ್ರತೆ ಇದೆ. ರಾತ್ರಿ ಸ್ಥಳಕ್ಕೆ ತಲುಪಿದ ಸಿಪಿಎಂ ಕಾರ್ಯಕರ್ತರೊಂದಿಗೆ ಅಭ್ಯರ್ಥಿಯೊಬ್ಬರು ಇದ್ದರು. ಇದನ್ನು ಗಮನಿಸಿದ ಯುಡಿಎಫ್ ಕಾರ್ಯಕರ್ತರು ಅವರನ್ನು ತಡೆದರು. ಇದು ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಯಿತು.
ರಾಜಕೀಯ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಮತ್ತು ತಳ್ಳಾಟ ಹೆಚ್ಚಾದಂತೆ, ಪೋಲೀಸರು ಮಧ್ಯಪ್ರವೇಶಿಸಿ ಎರಡೂ ಕಡೆಯವರನ್ನು ಹಿಮ್ಮೆಟ್ಟಿಸಿದರು.



