ಕಣ್ಣೂರು: ಸ್ಥಳೀಯಾಡಳಿತ ಚುನಾವಣೆಯಲ್ಲಿನ ಸೋಲಿನ ಹತಾಶೆಯನ್ನು ಹೊರಹಾಕಲು ಸಿಪಿಎಂ ಕೋಲುಗಳೊಂದಿಗೆ ಪ್ರತಿಭಟನೆ ನಡೆಸಿತು. ಕಣ್ಣೂರಿನಲ್ಲಿ ಹಿಂಸಾತ್ಮಕವಾದ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಯುಡಿಎಫ್ ಮೆರವಣಿಗೆ ಮೇಲೂ ದಾಳಿ ನಡೆಸಲಾಯಿತು. ಕೋಪಗೊಂಡ ಸಿಪಿಎಂ ಕಾರ್ಯಕರ್ತರು ಕೋಲುಗಳನ್ನು ಬೀಸಿ ಜನರ ಮೇಲೆ ಧಾವಿಸಿದರು. ಅವರು ಹತ್ತಿರದ ಮನೆಗಳಲ್ಲಿ ಗಿಡಗಳ ಕುಂಡಗಳನ್ನು ನಾಶಪಡಿಸಿದರು ಮತ್ತು ಜನರನ್ನು ಬೆದರಿಸಿದರು.ಪ್ರತಿಭಟನೆಯೊಂದಿಗೆ ಬಂದ ಸಿಪಿಎಂ ಕಾರ್ಯಕರ್ತರು ಲೀಗ್ ಕಾರ್ಯಕರ್ತನ ಮನೆಗೆ ನುಗ್ಗಿ ಮನೆಯಲ್ಲಿದ್ದ ವ್ಯಕ್ತಿಯೊಬ್ಬರ ಮೇಲೆ ಕೋಲು ಝಳಪಿಸಿದ್ದರು. ನಂತರ, ಅವರು ಮನೆಯಲ್ಲಿದ್ದ ಕಾರು ಮತ್ತು ಬೈಕ್ ಅನ್ನು ಬಡಿದು ನಾಶಪಡಿಸಿದರು.
ಕುನ್ನತ್ತಪರಂಬ ಪಂಚಾಯತ್ ಪರಾಭವದ ಬೇಗುದಿಯಲ್ಲಿ ಈ ದಾಳಿ ನಡೆಯಿತು. ಕಾರ್ಯಕರ್ತರು ಮುಖವಾಡ ಧರಿಸಿ ಈ ದಾಳಿ ನಡೆಸಲಾಗಿದೆ.
ಕೋಟಯಂ ಕಾಂಞ್ಞರಪಳ್ಳಿಯಲ್ಲೂ ಎಲ್.ಡಿ.ಎಫ್ ಭಾರೀ ದಾಂಧಲೆ ಸೃಷ್ಟಿಸಿರುವುದು ವರದಿಯಾಗಿದೆ.

