ಭಾರತದಲ್ಲಿ ಗಸಗಸೆಯನ್ನು ಹಿಂದಿಯಲ್ಲಿ ಕುಸ್ ಕುಸ್, ತೆಲುಗಿನಲ್ಲಿ ಗಸಗಸಲು, ತಮಿಳಿನಲ್ಲಿ ಕಸ ಕಸ, ಮಲಯಾಳಂನಲ್ಲಿ ಕಸ್ ಕಸ್, ಪಂಜಾಬಿಯಲ್ಲಿ ಖುಶ್ ಖುಶ್ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಗಸಗಸೆ ಬೀಜಗಳನ್ನು ಅನೇಕ ದೇಶಗಳಲ್ಲಿ, ವಿಶೇಷವಾಗಿ ಮಧ್ಯ ಯೂರೋಪ್‌ನಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹಲವಾರು ಭಕ್ಷ್ಯಗಳಲ್ಲಿ ಇದನ್ನು ಬಳಸುತ್ತಾರೆ ಹಾಗೂ ಇದರಿಂದ ಎಣ್ಣೆಯನ್ನು ತಯಾರಿಸಿ ಅದನ್ನೂ ಸಹ ಬಳಸುತ್ತಾರೆ. ಇದರಿಂದ ಇರುವ ಆರೋಗ್ಯಕರ ಉಪಯೋಗಗಳಿಗಾಗಿ ಮುಂದೆ ನೋಡಿ.
ಗಸಗಸೆ ಬೀಜಗಳು ಕರಗದ ಫೈಬರ್‌ನ ಮೂಲಗಳಾಗಿವೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಮಲಬದ್ಧತೆಯ ಸಮಸ್ಯೆಗೂ ಸಹ ಚಿಕಿತ್ಸೆಯನ್ನು ನೀಡುತ್ತದೆ.
ಗಸಗಸೆಯಲ್ಲಿರುವ ಫೈಬರ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವ ಗಸಗಸೆ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ, ಇದು ನಿಮ್ಮನ್ನು ಅತಿಯಾದ ಆಹಾಎ ಸೇವನೆಯನ್ನು ತಡೆಯುತ್ತದೆ.
ಗಸಗಸೆಯಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳು ಗಸಗಸೆಯಲ್ಲಿವೆ. ಇದು ಮೂಳೆಯ ಆರೋಗ್ಯಕ್ಕೆ ಅತ್ಯಗತ್ಯ. ಗಸಗಸೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ರಕ್ಷಿಸುತ್ತವೆ ಮತ್ತು ಆರೋಗ್ಯಕರವಾಗಿರಲು ನೆರವಾಗುತ್ತದೆ.
ಗಸಗಸೆ, ಮೊಸರು ಮತ್ತು ಮೆಣಸಿನ ಮಿಶ್ರಣವನ್ನು ತಲೆಗೆ ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಗಸಗಸೆ, ಹಾಲು ಮತ್ತು ಈರುಳ್ಳಿಯ ಮಿಶ್ರಣವನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಗಸಗಸೆಯಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

