ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಸೋಮವಾರದಂದು ಗದ್ದೆಮನೆ ಪರಮೇಶ್ವರ ಭಟ್ಟರ ವತಿಯಿಂದ ವಿಶೇಷ ಸೇವೆ ನಡೆಯಿತು. ಇದೇ ಸಂದರ್bದಲ್ಲಿ ಬೆಳಗ್ಗೆ ರೋಹಿಣಿ ಎಸ್.ದಿವಾಣ ಎಡನಾಡು ಇವರಿಂದ ಸಂಗೀತ ಸೇವೆ ನಡೆಯಿತು. ಅವರಿಗೆ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಪ್ರಸಾದ ರೂಪವಾಗಿ ಪಟ್ಟೆಸೀರೆ ನೀಡಿ ಗೌರವಿಸಲಾಯಿತು. ವಿದ್ವಾನ್ ಪ್ರಭಾಕರ ಕುಂಜಾರು ವಯಲಿನ್‍ನಲ್ಲಿ ಹಾಗೂ ಶ್ಯಾಮ ಭಟ್ ಸುಳ್ಯ ಮೃದಂಗದಲ್ಲಿ ಜೊತೆಗೂಡಿದರು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ವಿಶೇಷ ದೀಪಾಲಂಕಾರದೊಂದಿಗೆ ಕಾರ್ತಿಕ ಪೂಜೆ ನಡೆಯಿತು.




.jpg)
